ವುಮೆನ್ಸ್‌ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೋ ಲಾಂಚ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 19. ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಈಗಾಗಲೇ ಸಾಕಷ್ಟು ಕ್ರಿಕೆಟ್ ಲೀಗ್‌ಗಳು ಚಾಲ್ತಿಯಲ್ಲಿವೆ‌. ಟಿಪಿಎಲ್ ಹಾಗೂ ವೃತ್ತಿಪರರಿಗಾಗಿ IPT12ನಿಂದ ಆರಂಭವಾಗಿ ಈಗ WWCL (ವುಮೆನ್ಸ್‌ ವಿಂಡ್ ಬಾಲ್ ಕ್ರಿಕೆಟ್ ಲೀಗ್) ವರೆಗೂ ಬಂದು ನಿಂತಿದೆ.

ಟಿಪಿಎಲ್, IPT12 ಆಯೋಜಿಸಿದ್ದ ಎನ್‌ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ.ಆರ್. ಇದೀಗ ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ ಟೂರ್ನಿಯೊಂದನ್ನು ಆಯೋಜಿಸಿದ್ದಾರೆ. ಈ ಟೂರ್ನಿಗೆ ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಎಂದು ನಾಮಕರಣ ಮಾಡಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಡಬ್ಲ್ಯುಡಬ್ಲ್ಯುಸಿಎಲ್‌ ಲೋಗೋ ಲಾಂಚ್ ಕಾರ್ಯಕ್ರಮ ನಡೆಯಿತು. ನಿರ್ಮಾಪಕ ಭಾಮ‌ ಹರೀಶ್ ಲೋಗೊ ಲಾಂಚ್ ಮಾಡಿ ಎಲ್ಲ ತಂಡಕ್ಕೂ ಆಲ್ ದಿ ಬೆಸ್ಟ್ ತಿಳಿಸಿದರು.

Also Read  ತುನಿವು ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದ ಯುವಕ ➤ ಲಾರಿ ಮೇಲಿಂದ ಜಾರಿ ಬಿದ್ದು ಮೃತ್ಯು..!!

error: Content is protected !!
Scroll to Top