ಫೋಟೋಶೂಟ್‌ನಲ್ಲಿ ಯುವರಾಣಿಯಂತೆ ಮಿಂಚಿದ ನಟಿ ರಾಧಿಕಾ ಪಂಡಿತ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 19. ಸ್ಯಾಂಡಲ್‌ವುಡ್ ನಟ ಯಶ್ ಜೊತೆಗೆ ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿದ್ದ ನಟಿ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಮಾತ್ರಾ ಭಾರೀ ಆ್ಯಕ್ಟೀವ್ ಆಗಿದ್ದರು.

ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋಶೂಟ್‌ನಲ್ಲಿ ಮಿಂಚಿದ ರಾಧಿಕಾ ಪಂಡಿತ್ ಲೆಹಂಗಾ ಹಾಗೂ ಸೀರೆ, ಆಭರಣಗಳನ್ನು ಧರಿಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ಲುಕ್ ಭಾರೀ ವೈರಲ್ ಆಗುತ್ತಿದ್ದು, ಈ ರೀತಿ ಲುಕ್ ಯಾವ ಕಾರಣಕ್ಕೆ ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇನ್ನು ನಟಿ ರಾಧಿಕಾ ಪಂಡಿತ್ ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕಾಮೆಂಟ್‌ಗಳ ಸುರಿಮಳೆ ಬಂದಿದ್ದು ಯಾವಾಗ ಸಿನಿಮಾ ಎಂದು ಫ್ಯಾನ್ಸ್ ಗಳು ಪ್ರಶ್ನಿಸುತ್ತಿದ್ದಾರೆ. ರಾಧಿಕಾ ಹೀಗೆ ಫೋಟೋಶೂಟ್‌ನಲ್ಲಿ ಕಾಣಿಸ್ಕೊಂಡಿರುವುದು ಆಭರಣ ಜಾಹೀರಾತುವೊಂದರ ರಾಯಭಾರಿಯಾಗಿರುವುದಕ್ಕಾಗಿ ಎನ್ನಲಾಗಿದೆ.

Also Read  ಉಡುಪಿ : ಹೊಸ ವರ್ಷಕ್ಕೆ ಟ್ರಾಫಿಕ್ ದಟ್ಟಣೆ

 

 

error: Content is protected !!
Scroll to Top