‘ಸಿದ್ದರಾಮಯ್ಯಅವರು ಈಗಾಲಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’- ಯದುವೀರ್

(ನ್ಯೂಸ್ ಕಡಬ) newskadaba.com .19,ಮೈಸೂರು:  ಸಿಎಂ ಸಿದ್ದರಾಮಯ್ಯ ಈಗಾಲಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು.

ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು, ಮುಡಾದಲ್ಲಿ 5 ಸಾವಿರ ಕೋಟಿ ಮೊತ್ತದ ಹಗರಣ ನಡೆದಿದೆ. ಮುಖ್ಯಮಂತ್ರಿ ಕುಟುಂಬವೇ ನಿವೇಶನಗಳ ಫಲಾನುಭವಿ ಆಗಿರುವ ಕಾರಣ ಸ್ವತಂತ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಈ ಹಿಂದಿನಿಂದಲೂ ಒತ್ತಾಯಿಸುತ್ತ ಬಂದಿದೆ. ರಾಜ್ಯಪಾಲರು ಸಹ ತನಿಖೆಗೆ ಸೂಚಿಸಿದ್ದಾರೆ. ಈಗಾಲಾದರೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂ ದು ಅವರು ಆಗ್ರಹಿಸಿದರು.

Also Read  ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ► ಸರ್ಕಾರಿ ಆಸ್ಪತ್ರೆಯಲ್ಲೇ ವಾಮಾಚಾರ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ ಬಿಜೆಪಿ ಕಾನೂನಾತ್ಮಕಹೋರಾಟ ಮುಂದುವರಿಸಲಿದೆ ಎಂದರು. ಇ.ಡಿ. ದಾಳಿ ರಾಜಕೀ ಯ ಪ್ರೇರಿತ ಅಲ್ಲ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

error: Content is protected !!
Scroll to Top