ಭಾರತೀಯ ಅಂಚೆ ಮೂಲಕ ತರಿಸಿಕೊಂಡ 21 ಕೋಟಿ ಮೌಲ್ಯದ ಡ್ರಗ್ಸ್ ವಶ

(ನ್ಯೂಸ್ ಕಡಬ) newskadaba.com .19, ಬೆಂಗಳೂರು:  ದುಷ್ಕರ್ಮಿಗಳು ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

28 ಕೆ.ಜಿ. ಹೈಡ್ರೋ ಗಾಂಜಾ, 2,569 ಎಲ್‌ಎಸ್‌ಡಿ, 1 ಕೆ.ಜಿ. 618 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 11,908 ಎಕ್ಸ್‌ಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್‌, 102 ಗ್ರಾಂ ಕೊಕೇನ್‌, 6 ಕೆ.ಜಿ.280 ಗ್ರಾಂ ಆಮ್‌ಫಿಟಮೈನ್‌, 336 ಗ್ರಾಂ ಚರಸ್‌, 1 ಕೆ.ಜಿ. 217 ಗ್ರಾಂ ಗಾಂಜಾ ಎಣ್ಣೆ, 445 ಗ್ರಾಂ ಮೆಥಾಕ್ಸಿನ್‌, 11 ಇ-ಸಿಗರೇಟ್‌, 102 ಎಂಎಲ್‌ ನಿಕೋಟಿನ್‌, 400 ಗ್ರಾಂ ಟೊಬ್ಯಾಕೋ ಸೇರಿದಂತೆ ಇತರೆ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆನ್ಯಾಯಾಲಯದಿಂದ ಅನುಮತಿ ಪಡೆದು ₹21.17 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Also Read  ರಫೇಲ್ ಯುದ್ಧ ವಿಮಾನಕ್ಕೆ ಕನ್ನಡಿಗ ಸಾರಥಿ

error: Content is protected !!
Scroll to Top