ನಿದ್ದೆಯ ಕನಸಲ್ಲಿ ಇಬ್ಬರು ಮಾತಾಡ್ಬೋದು; ವಿಜ್ಞಾನಿಗಳ ಹೊಸ ಸಂಶೋದನೆ

(ನ್ಯೂಸ್ ಕಡಬ) newskadaba.com .18,: ಕನಸು ಕಾಣುತ್ತಿರುವಾಗ ಯಾರೊಂದಿಗಾದರೂ ಸಂವಹನ ನಡೆಸಬಹುದು ಎನ್ನುವ ಕುತೂಹಲದ ವಿಷಯವನ್ನು ಸಂಶೋಧನೆ ಮೂಲಕ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಇಂಥ ಒಂದು ಕುತೂಹಲದ ಸಂಶೋಧನೆ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಗಾಢ ನಿದ್ದೆಯಲ್ಲಿ ಇರುವಾಗ ಸ್ಪಷ್ಟವಾದ ಕನಸಿನ ಮೂಲಕ ಮತ್ತೊಬ್ಬ ವ್ಯಕ್ತಿಯ ಜೊತೆ ಸಂವಹನ ನಡೆಸಬಹುದು. ಇಬ್ಬರ ನಡುವೆ  ದ್ವಿಮುಖ ಸಂವಹನವನ್ನು ಸಾಧಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ನಡೆದ ಸಂವಹನ ಎಂದು ಅವರು ಹೇಳಿದ್ದಾರೆ.

ಇದಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಸಂಶೋಧನೆ ಮಾಡಲಾಗಿದೆ. ಈ ಸಂಶೋಧನೆಯ ಪ್ರಕಾರ ವ್ಯಕ್ತಿಗಳು ಗಾಢ ನಿದ್ದೆಯಲ್ಲಿ ಇರುವಾಗ ಯಾವ ರೀತಿ ಸಂವಹನ ನಡೆಸುತ್ತಾರೆ ಎಂಬ ಬಗ್ಗೆ ವಿಡಿಯೋ ಕೂಡ ಮಾಡಲಾಗಿದೆ. ಇಬ್ಬರು ವ್ಯಕ್ತಿಗಳನ್ನು  ಹಾಸಿಗೆಗಳ ಮೇಲೆ ಮಲಗಿಸಲಾಗಿದೆ.  ಅವರ ಮೆದುಳಿನ ಅಲೆಗಳು ಮತ್ತು ಇತರ ಪಾಲಿಸೋಮ್ನೋಗ್ರಾಫಿಕ್ ಡೇಟಾವನ್ನು ದೂರದಿಂದಲೇ ಟ್ರ್ಯಾಕ್ ಮಾಡುವ ವಿಶೇಷವಾಗಿ ವಿನ್ಯಾಸಗೊಳಿಸಿದ ಉಪಕರಣಗಳನ್ನು  ಅವರಿಗೆ ಅಳವಡಿಸಲಾಗಿತ್ತು.  ಈ ಸಾಧನಗಳನ್ನು REMspace ವ್ಯವಸ್ಥೆಯ ಹೃದಯಭಾಗವಾದ ಸೆಂಟ್ರಲ್ ಸರ್ವರ್‌ಗೆ ಲಿಂಕ್ ಮಾಡಲಾಗಿತ್ತು.  ಇದು  ನಿದ್ರೆಯ ಮಾದರಿಗಳನ್ನು ಮೇಲ್ವಿಚಾರಣೆ ಮಾಡುವ ಸಾಧನವಾಗಿದೆ.  ನಿದ್ರೆಯ REM ಅಂದರೆ, ಕ್ಷಿಪ್ರ ಕಣ್ಣಿನ ಚಲನೆ ಹಂತದಲ್ಲಿ ಸ್ಪಷ್ಟವಾದ ಕನಸು ಸಂಭವಿಸುತ್ತದೆ, ಈ ಅವಧಿಯಲ್ಲಿ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ ಮತ್ತು ಕನಸುಗಳು ಎದ್ದುಕಾಣುತ್ತವೆ. ಒಬ್ಬ ವ್ಯಕ್ತಿಯು ಸ್ಪಷ್ಟವಾದ ಕನಸಿನಲ್ಲಿ ತೇಲುತ್ತಿರುವಂತೆ ಆರಂಭದಲ್ಲಿ ಅನುಭವಾಯಿತು.  ಈ ಸರ್ವರ್, ಸ್ಪಷ್ಟವಾದ ಕನಸನ್ನು ಸೂಚಿಸುವ ವಿಭಿನ್ನ ಮೆದುಳಿನ ತರಂಗ ಮಾದರಿಗಳನ್ನು ಪತ್ತೆಹಚ್ಚಿದೆ.  ಒರ್ವ ವ್ಯಕ್ತಿ ಗಾಢ ನಿದ್ರೆಯಲ್ಲಿದ್ದಾಗ “ಜುಲಕ್’ ಎಂಬ ಪದ ಉಚ್ಚರಿಸಿದ್ದಾನೆ. ಈ ಸಮಯದಲ್ಲಿ ಆತ ಲುಸಿಡ್ ಡ್ರೀಮ್​ನಲ್ಲಿದ್ದ (ಗಾಢ ನಿದ್ರೆಯಲ್ಲಿದ್ದಾಗ ಕಾಣುವ ಕನಸು) ಎಂಬುದನ್ನು ವೈಜ್ಞಾನಿಕ ಸಾಧನಗಳ ಮೂಲಕ ಖಚಿತ ಪಡಿಸಿಕೊಳ್ಳಲಾಗಿದೆ.ಎಂಟು ನಿಮಿಷಗಳ ಈ ಸಂಶೋಧನೆಯಲ್ಲಿ ಇಬ್ಬರೂ ಕನಸಿನಲ್ಲಿಯೇ ಪರಸ್ಪರ ಸಂವಹನ ನಡೆಸುತ್ತಿರುವುದು ಪತ್ತೆಯಾಗಿದೆ.

Also Read  ಪೆಟ್ರೋಲ್‌ ರಿಕ್ಷಾ ಹಾಗೂ ಇ-ಆಟೋ ಚಾಲಕರ ನಡುವೆ ಗಲಾಟೆ

error: Content is protected !!
Scroll to Top