ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ?

(ನ್ಯೂಸ್ ಕಡಬ) newskadaba.com ಅ.18. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು, ದೀರ್ಘಕಾಲದ ಕಾಯಿಲೆಗಳು ಹೆಚ್ಚಿನ ಜನರನ್ನು ಕಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ಹೃದ್ರೋಗ, ಮಧುಮೇಹ ಸಣ್ಣ ವಯಸ್ಸಿನಲ್ಲೇ ಬಾಧಿಸತೊಡಗುತ್ತಿದೆ. ಇದರ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಕ್ರಮಗಳನ್ನು ಸೂಚಿಸಿದೆ.

ಸಾಂಕ್ರಾಮಿಕವಲ್ಲದ ಮತ್ತು ದೀರ್ಘಕಾಲದ ಕಾಯಿಲೆಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್,ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಮಧುಮೇಹ ಸೇರಿದೆ. ಈ ಕಾಯಿಲೆಗಳು ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ, ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದು, ಮದ್ಯಪಾನ ಅಥವಾ ವಾಯು ಮಾಲಿನ್ಯದ ಕಾರಣದಿಂದ ಮಕ್ಕಳು, ವಯಸ್ಕರು ಮತ್ತು ವೃದ್ಧರು ಅನಾರೋಗ್ಯಕ್ಕೆ ಕಾರಣವಾಗುವ ಅಪಾಯ ಹೆಚ್ಚಾಗಿದೆ.ಇದರಲ್ಲಿ ಕಾಯಿಲೆಗಳನ್ನು ಶೀಘ್ರದಲ್ಲಿ ಪತ್ತೆಹಚ್ಚುವುದು, ಸಕಾಲಿಕ ತಪಾಸಣೆ, ಚಿಕಿತ್ಸೆ ನೀಡುವುದು ಸೇರಿದೆ. ಇದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು, ಮದ್ಯಪಾನವನ್ನು ಕಡಿಮೆ ಮಾಡಬೇಕು, ಧೂಮಪಾನವನ್ನು ನಿಲ್ಲಿಸಬೇಕು, ನಿರಂತರ ದೈಹಿಕ ಚಟುವಟಿಕೆ ನಡೆಸಬೇಕು, ವಾಯುಮಾಲಿನ್ಯಕ್ಕೆ ನಮ್ಮನ್ನು ನಾವು ಒಡ್ಡದಂತೆ ಜಾಗರೂಕತೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Also Read  ತಲೆ ಕೂದಲು ಬೆಳ್ಳಗಾಗುವುದು 'ಹೃದಯ ಸಂಬಂಧಿ'ಖಾಯಿಲೆ ಲಕ್ಷಣ

 

error: Content is protected !!
Scroll to Top