ಹಮಾಸ್ ಮುಖ್ಯಸ್ಥನ ಕೊನೆ ಕ್ಷಣದ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

(ನ್ಯೂಸ್ ಕಡಬ) newskadaba.com ಜೆರುಸಲೇಂ, ಅ.18. ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನ ಹತ್ಯೆ ಮಾಡಲಾಗಿದ್ದು, ಆತನ ಕೊನೆಯ ಕ್ಷಣಗಳ ಡ್ರೋನ್ ದೃಶ್ಯವನ್ನು ಇಸ್ರೇಲ್ ಅವರು ಬಿಡುಗಡೆ ಮಾಡಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆ ಮಾಡಿದ ಈ ವಿಡಿಯೋದಲ್ಲಿ ಹಾನಿಗೊಳಗಾದ ಮತ್ತು ಶಿಥಿಲಗೊಂಡ ಮನೆಯೊಳಗೆ ಸಿನ್ವಾರ್ ಮಂಚದ ಮೇಲೆ ಕುಳಿತಿರುವುದನ್ನು ವೀಡಿಯೋ ತೋರಿಸಿದೆ. ಆತನ ಅಂತಿಮ ಕ್ಷಣಗಳಲ್ಲಿ, ಡ್ರೋನ್‌ಗೆ ವಸ್ತುವನ್ನು ಎಸೆಯುವುದನ್ನು ಕಾಣಬಹುದಾಗಿದೆ. ಈ ವಿಯೋವನ್ನು ಇಸ್ರೇಲ್ ಯಾಹ್ಯಾ ಸಿನ್ವಾರ್‌ನ ‘ಕೊನೆಯ ಕ್ಷಣಗಳು’ ಎಂದು ಹೇಳಿ ಪೋಸ್ಟ್ ಮಾಡಿದೆ. ಇನ್ನು ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಕೊಲೆಗಾರ ಯಾಹ್ಯಾ ಸಿನ್ವಾರ್ ಅನ್ನು ಐಡಿಎಫ್ ಸೈನಿಕರು ನಿರ್ಮೂಲನೆ ಮಾಡಿದರು ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.

Also Read  10 ದಿನಕ್ಕೆ ಗಂಡನ ವಿರುದ್ಧ ದೂರು ದಾಖಲಿಸಿದ ನಟಿ ಪೂನಂ ಪಾಂಡೆ!

 

error: Content is protected !!
Scroll to Top