ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ; ಸುಪ್ರೀಂ ಮಹತ್ವದ ತೀರ್ಪು

(ನ್ಯೂಸ್ ಕಡಬ) newskadaba.com .18, ನವದೆಹಲಿ: ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ಅವರಿಗೆ ಬಿಗ್ರಿಲೀಫ್ಸಿಕ್ಕಿದ್ದು, ಅವರ ಕೊಯಮತ್ತೂರ್ ಇಶಾ ಫೌಂಡೇಶನ್ ವಿರುದ್ಧ ಆರೋಪಗಳನ್ನು ಸುಪ್ರೀಂ ಕೋರ್ಟ್ವಜಾಗೊಳಿಸಿದೆ.

ಶ್ರಮದಲ್ಲಿ ಅಕ್ರಮವಾಗಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಂಧನದಲ್ಲಿಟ್ಟಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಕಾಮರಾಜ್ ಎಂಬವವರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ಅದನ್ನು ವಜಾಗೊಳಿಸಿದೆ. ಇನ್ನು ಇದಕ್ಕೂ ಮುನ್ನ ಇಶಾ ಫೌಂಡೇಶನ್ವಿರುದ್ಧದ ಆರೋಪಗಳಿಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ತಮಿಳುನಾಡು ಪೊಲೀಸರು ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ಇಶಾ ಫೌಂಡೇಶನ್ವಿರುದ್ಧ ಮದ್ರಾಸ್ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ಆದೇಶದಂತೆಯೇ ಬಗ್ಗೆ ಸವಿಸ್ತಾರವಾದ ವರದಿಯೊಂದನ್ನು ಕೊಯಂಬತ್ತೂರ್ಪೊಲೀಸ್ವರಿಷ್ಠಾಧಿಕಾರಿ ಕಾರ್ತಿಕೇಯನ್ಸಲ್ಲಿಸಿದ್ದಾರೆ. ಪೊಲೀಸರ ವರದಿ ಪ್ರಕಾರ ಈಶಾ ಫೌಂಡೇಶನ್ಆಶ್ರಮದಲ್ಲಿ ಒಟ್ಟು 217 ಬ್ರಹ್ಮಚಾರಿಗಳು ಇದ್ದಾರೆ. ಅವರಲ್ಲಿ 30ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಅವರೆಲ್ಲರೂ ತಾವು ಸ್ವ ಇಚ್ಛೆಯಿಂದಲೇ ಅಶ್ರಮದಲ್ಲಿರುವುದಾಗಿ ಹೇಳಿದ್ದಾರೆ. ಮಹಿಳೆಯರು ಇಲ್ಲಿ ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ಇಶಾ ಫೌಂಡೇಶನ್ನಲ್ಲಿ ಕಳೆದ 15 ವರ್ಷಗಳಲ್ಲಿ ಆರು ನಾಪತ್ತೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರದಿಯಲ್ಲಿ ಸೇರಿಸಲಾಗಿದೆ. ಇವುಗಳಲ್ಲಿ, ಐದು ಪ್ರಕರಣಗಳು ಇತ್ಯರ್ಥಗೊಂಡಿವೆ. ಆದರೆ ಒಬ್ಬ ವ್ಯಕ್ತಿಯನ್ನು ಇನ್ನೂ ಪತ್ತೆಹಚ್ಚದ ಕಾರಣ ತನಿಖೆ ಮುಂದುವರೆಸಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!

Join the Group

Join WhatsApp Group