(ನ್ಯೂಸ್ ಕಡಬ) newskadaba.com ಅ.18, ಚಿಕ್ಕಮಗಳೂರು. ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ.
ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಇದರ ಲಾಭ ಕಾಫಿ ದಾಸ್ತಾನು ಇರಿಸಿಕೊಂಡಿದ್ದ ಕೆಲವೇ ಕೆಲವು ಬೆಳೆಗಾರರು ಮತ್ತು ವರ್ತಕರಿಗೆ ಮಾತ್ರ ಲಭ್ಯವಾಗಿದೆ. ಕಾಫಿಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ.