ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರು ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಅ.18. ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು. ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯದ ತೂಗು ಸೇತುವೆಯ ಮೇಲೆ ಮೂವರು ಹೋಗುತ್ತಿದ್ದ ವೇಳೆ ರೋಪ್ ತುಂಡಾಗಿದೆ. ಮೂವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Also Read  ಚಿತ್ರಕಲಾ ಗ್ರೇಡ್ ಪರೀಕ್ಷೆ- ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢ ಶಾಲೆಗೆ ಶೇಕಡಾ 100 ಫಲಿತಾಂಶ; ಅಂಜನಾ ಜೇಮ್ಸ್ ಪ್ರಥಮ, ಲವ್ಯಶ್ರೀ ದ್ವಿತೀಯ

 

error: Content is protected !!
Scroll to Top