ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರದಲ್ಲಿ ನೃತ್ಯ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಅ.18. ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ  ಪ್ರದರ್ಶನ ನೀಡಿ ಮೈಸೂರಿನ ಸಾಂಸ್ಕೃತಿಕ ತಂಡದ ತೀರ್ಪುಗಾರರ ಮೆಚ್ಚುಗೆ ಪಡೆದ ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ , ಸಾಂಸ್ಕೃತಿಕ ತಂಡ ಯುವ ದಸರದಲ್ಲಿ ದಕ್ಷಿಣ ಕನ್ನಡ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದ ಈ ತಂಡ ಸಾವಿರಾರು ಪ್ರೇಕ್ಷಕರ ಗಮನ ಸೆಳೆದರು.

 

ಕಾಲೇಜಿನ ಪ್ರಾಂಶುಪಾಲರಾದ ಡಾ ದಿನೇಶ್ ಪಿ ಟಿ ಅವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ ವಿನ್ಯಾಸ್ ಹೊಸೊಳಿಕೆ ಮತ್ತು ರಾಜಕೀಯ ಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಸ್ವಾತಿ ಇವರ ಮಾರ್ಗದರ್ಶನದಲ್ಲಿ ತಂಡವು ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪ್ರದರ್ಶನ ಪಡಿಸಿತು. ಈ ತಂಡಕ್ಕೆ ನೃತ್ಯ ಸಂಯೋಜನೆಯನ್ನು ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ತಂಡದ ನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ರೈ, ನೃತ್ಯ ನಿರ್ದೇಶನ ಅಶೋಕ್ ಬೆಳ್ಳಾರೆ, ಮುಖವರ್ಣಿಕೆ ಶ್ರೀ ಸತೀಶ್ ಪಂಜ, ನೃತ್ಯ ಸಹ ನಿರ್ದೇಶನ ಕುಮಾರಿ ಭಾಗ್ಯ, ಕುಮಾರಿ ನಿಶ್ಮಿತಾ ಹಾಗೂ ಯಕ್ಷಿತ್ ಸಹಕರಿಸಿದರು.

Also Read  ದೀಪಕ್ ರಾವ್ ಹತ್ಯೆ ಖಂಡಿಸಿ ಕಡಬದಲ್ಲಿ ರಸ್ತೆ ತಡೆದು ಪ್ರತಿಭಟನೆ ► ರಾಜ್ಯ ಸರಕಾರದ ವಿರುದ್ಧ ಘೋಷಣೆ

 

error: Content is protected !!
Scroll to Top