(ನ್ಯೂಸ್ ಕಡಬ) newskadaba.com ಅ.17. ಇನ್ನುಮುಂದೆ ರೈಲ್ವೇ ಪ್ರಯಾಣಿಕರಿಗೆ ಪ್ರಯಾಣದ 60 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ವರದಿಗಳ ಪ್ರಕಾರ, ಇನ್ಮುಂದೆ 60 ದಿನದ ಮೊದಲೇ ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ನವೆಂಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ ಎಂದು ತಿಳಿಸಲಾಗಿದೆ.
ಹಿಂದಿನ 120 ದಿನಗಳ ಬುಕಿಂಗ್ ಅವಧಿಗೆ ಬದಲಾಗಿ ಪ್ರಯಾಣಿಕರು ಈಗ 60 ದಿನಗಳ ಮುಂಚಿತವಾಗಿ ಮಾತ್ರ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಮುಂಗಡ ಕಾಯ್ದಿರಿಸುವಿಕೆಯ ಅವಧಿಯು ರೈಲು ನಿರ್ಗಮಿಸುವ ದಿನವನ್ನು ಹೊರತುಪಡಿಸಿ ಇರುತ್ತದೆ. ಹೊಸ ನಿಯಮವು ನವೆಂಬರ್ ಒಂದರಿಂದ ಜಾರಿಗೆ ಬರಲಿದೆ ಮತ್ತು ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ.