ಹಳೆಯ ವಾಹನ ಗುಜರಿಗೆ ಹಾಕುವ ಮುನ್ನ ಅನುಮತಿ, ಆರ್.ಸಿ ರದ್ದು ಕಡ್ಡಾಯ..!

(ನ್ಯೂಸ್ ಕಡಬ) newzkadaba.com ಅ.17. ಹಳೆಯ ವಾಹನವನ್ನು ಗುಜರಿಗೆ ಮಾರಾಟ ಮಾಡಿದರೆ ವಾಹನ ಕೆಡವದೆ ದೋಷಗಳನ್ನು ಸರಿಪಡಿಸಿ ಮರು ಬಳಕೆ ಮಾಡುವ, ಇಂತಹ ವಾಹನವನ್ನು ಕಳ್ಳತನ, ದರೋಡೆ, ನಿಷೇಧಿತ ಮಾದಕ ವಸ್ತುಗಳ ಸಾಗಾಟ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ. ಇಂತಹ ಕೃತ್ಯಗಳಲ್ಲಿ ಸಿಕ್ಕಿ ಬಿದ್ದರೆ ವಾಹನದ ನೋಂದಣಿ ರದ್ದು ಮಾಡದ ಕಾರಣ, ವಾಹನ ಮಾಲೀಕರು ಅಪರಾಧ ಪ್ರಕರಣಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಇದರಿಂದ ಪಾರಾಗಲು ವಾಹನ ಕೆಡಹುವ ಮುನ್ನ ಅಥವಾ ಸ್ಕ್ರ್ಯಾಪ್‌ಗೆ ಹಾಕುವ ಮೊದಲು ಅನುಮತಿ ಪಡೆಯುವಂತೆ ಮೋಟಾರು ವಾಹನ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.


ವಾಹನ ಕೆಡವಲು ಅನುಮತಿ ಹಾಗೂ ನೋಂದಣಿ ಪ್ರಮಾಣಪತ್ರದ ರದ್ದತಿಗಾಗಿ ಅರ್ಜಿ ಸಲ್ಲಿಸಬೇಕು. ವಾಹನದ ಈ ಹಿಂದಿನ ಬಾಕಿ ದಂಡ ಪಾವತಿ ಇತ್ಯಾದಿಗಳನ್ನು ಸಹಾಯಕ ಮೋಟಾರು ವಾಹನ ತಪಾಸಣಾಧಿ ಕಾರಿ(ಎಎಂವಿಐ) ಪರಿಶೀಲಿಸಿ ಪಾವತಿ ಬಾಕಿ ಇದ್ದರೆ ಅದನ್ನು ಪಾವತಿಸಿದ ಬಳಿಕ ಆರ್‌ಸಿ ರದ್ದುಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನ ಕೆಡವಲು ಹಸ್ತಾಂತರಿಸಿದರೂ, ಆರ್‌ಸಿ ರದ್ದುಗೊಳಿಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಜರಿಗೆ ನೀಡಿದ ವಾಹನವನ್ನು ಮಾಲೀಕರಿಗೆ ತಿಳಿಯದಂತೆ ಮರುಬಳಕೆ ಮಾಡುವ ಸಾಧ್ಯತೆ ತಪ್ಪಿಸಲು ಮೋಟಾರು ವಾಹನ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ವಾಹನಗಳ ಅವಧಿ ಅಥವಾ ಅಪಘಾತಗಳ ಕಾರಣದಿಂದ ನಿರುಪಯುಕ್ತವಾದಾಗ ಅದನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ. ಆರ್‌ಸಿ ರದ್ದುಗೊಳಿಸದೇ ವಾಹನವನ್ನು ಸ್ಕ್ರ್ಯಾಪ್ ಮಾಡಲು ಹಸ್ತಾಂತರಿಸಿದಾಗ ವಾಹನದ ಎಲ್ಲ ದಾಖಲೆಗಳು ಹಾಗೇ ಉಳಿಯುತ್ತವೆ.

Also Read  ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಸ್ಕ್ರ್ಯಾಪ್ ಮಾಡಲಾಗುವ ವಾಹನದ ಎಂಜಿನ್ ಅಥವಾ ಚೇಸಿಸ್‌ ನ್ನು ಬೇರೆ ವಾಹನದಲ್ಲಿ ಬಳಸುವ ಸಾಧ್ಯತೆಯೂ ಇದೆ. ಇಂತಹ ವಾಹನಗಳು ಅಪಘಾತ ಅಥವಾ ಕಾನೂನು ಬಾಹಿರ ಕೃತ್ಯಗಳಲ್ಲಿ ಸಿಕ್ಕಿ ಬಿದ್ದರೆ ಎಂಜಿನ್ ಮತ್ತು ಚೇಸಿಸ್ ಸಂಖ್ಯೆ ಮೂಲಕ ಮೂಲ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಸ್ತೆಗಳಲ್ಲಿ ಸಂಚರಿಸುವ ವೇಳೆ ನಿಯಮ ಉಲ್ಲಂಘನೆ ಮಾಡಿ ಕ್ಯಾಮೆರಾದಲ್ಲಿ ಸೆರೆಯಾದರೆ ದಂಡದ ಸಂದೇಶ ತಲುಪಬಹುದು. ಇಂತಹ ತೊಂದರೆಗಳನ್ನು ತಪ್ಪಿಸಲು ವಾಹನಗಳನ್ನು ಸ್ಕ್ರ್ಯಾಪ್ ಗೆ ನೀಡುವ ಮುನ್ನ ಸಂಬಂಧಿಸಿದ ಮೋಟಾರು ವಾಹನ ಇಲಾಖೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸ್ಕ್ರ್ಯಾಪಿಂಗ್ ಬಳಿಕ ಪರಿ ವಾಹನ್ ಸೈಟ್‌ ನಲ್ಲಿ ಆರ್‌ಸಿ ರದ್ದುಪಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

Also Read  ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ಆರೋಪ ➤ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

error: Content is protected !!
Scroll to Top