(ನ್ಯೂಸ್ ಕಡಬ)newskadaba.com, ಅ. 17 ಬೆಂಗಳೂರು: ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಬುಧವಾರ ಹೇಳಿದರು.
ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸುವುದು ಎಂಬ ಚಿಂತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ರಾಜ್ಯದ ಕಟ್ಟ ಕಡೆಯ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ.
ವಿಶ್ವ ಆಹಾರ ದಿನ ವಿಶ್ವಾದ್ಯಂತ ಅಕ್ಟೋಬರ್ 16ರಂದು ಆಚರಿಸಲಾಗುತ್ತದೆ. 1945ರಲ್ಲಿ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಘಟನೆಯ ಸ್ಥಾಪನೆಯನ್ನು ಗೌರವಿಸುವುದಾಗಿ ಈ ದಿನವನ್ನು ನಿಶ್ಚಿತಗೊಳಿಸಲಾಗಿದೆ. ಆಹಾರದ ಪ್ರಾಮುಖ್ಯತೆ, ಹಸಿವು ಮತ್ತು ಬಡತನದ ನಿರ್ಮೂಲನೆ. ಪೋಷಣೆಯ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ.