(ನ್ಯೂಸ್ ಕಡಬ) newskadaba.com ಮಾಣಿ, ಅ. 17. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಅಕ್ಟೋಬರ್ 20ರಂದು ಭಾನುವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನದಲ್ಲಿ ನಡೆಯಲಿದೆ.
ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡುವರು. ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಧ್ವಜಾರೋಹಣಗೈಯಲಿರುವರು. ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಸಹಿತ ಆರು ಯುನಿಟ್ ವ್ಯಾಪ್ತಿಯ ಎಲ್ಲಾ ನಾಯಕರುಗಳು ಗಣ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಮಾಣಿ ಸೆಕ್ಟರ್ ವ್ಯಾಪ್ತಿಯ ಪಾಟ್ರಕೋಡಿ, ಮಿತ್ತೂರು, ಸೂರ್ಯ, ನೇರಳಕಟ್ಟೆ, ಶೇರಾ ಬುಡೋಳಿ, ಸೂರಿಕುಮೇರು ಯುನಿಟ್ ಗಳ ಪ್ರತಿಭೆಗಳ ಮಧ್ಯೆ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಲಮಾ ಉಮರಾ ಸಾಮಾಜಿಕ ನಾಯಕರುಗಳು, ಸೆಕ್ಟರ್, ಯುನಿಟ್, ಪ್ರತಿನಿಧಿಗಳು ಭಾಗವಹಿಸಲಿರುವರು. ಮರ್‌ಹೂಂ ಸರಫ್ರಾಝ್ ನೆಲ್ಲಿ ನಗರ ವೇದಿಕೆ, ಮರ್‌ಹೂಂ ಅಬ್ಬಾಸ್ ಪಟ್ಲಕೋಡಿ ವೇದಿಕೆ, ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆ, ಮರ್‌ಹೂಂ ಬಿನ್ಯಾಮಿನ್ ಝುಹ್ರಿ ವೇದಿಕೆ, ಮರ್‌ಹೂಂ ಅಬ್ದುಲ್ ರಝಾಕ್ ವೇದಿಕೆಗಳಲ್ಲಿ ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆಯಲಿದೆ ಎಂದು ಸೆಕ್ಟರ್ ಅಧ್ಯಕ್ಷ ಸಾಬಿತ್ ಪಾಟ್ರಕೋಡಿ, ಕಾರ್ಯದರ್ಶಿ ಮುಬಶ್ಶಿರ್ ಸಅದಿ ಸೂರಿಕುಮೇರು, ಕೋಶಾಧಿಕಾರಿ ಇಮ್ರಾನ್ ಮಾಣಿ ಮತ್ತು ಸ್ವಾಗತ ಸಮಿತಿ ಚೇರ್ಮನ್ ಹನೀಫ್ ಸಂಕ, ಕನ್ವೀನರ್ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಫೈನಾನ್ಸ್ ಸೆಕ್ರೆಟರಿ ಯೂಸುಫ್ ಹಾಜಿ, ಮಾಧ್ಯಮ ಕಾರ್ಯದರ್ಶಿ ಸಲೀಂ ಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.