ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಆಯೋಜನೆಯಲ್ಲಿ ‘ರೋಟರಿ ಕಂಬಳ’

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 17. ತುಳುನಾಡಿನ ಜನಪದ ಕ್ರೀಡೆಗಳಲ್ಲಿ ಕಂಬಳವೂ ಒಂದು, ಕರಾವಳಿಯಲ್ಲಿ ಪ್ರತೀವರ್ಷ ವಿವಿಧ ಕಂಬಳಸಮಿತಿಗಳು ಕಂಬಳ ವನ್ನು ಆಯೋಜಿಸುತ್ತಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿಯೂ ಕಂಬಳ ಆಯೋಜನೆಯಾಗಿ ದೇಶದ ಗಮನ ಸೆಳೆದಿತ್ತು.

ಇದೀಗ ಬಂಟ್ವಾಳ ತಾಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ತನ್ನ ಪಬ್ಲಿಕ್ ಇಮೇಜ್ ಕಾರ್ಯಕ್ರಮವಾಗಿ ಮರಿಕೋಣಗಳಿಗಾಗಿ “ರೋಟರಿ ಕಂಬಳ”ವನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದು, ಅ.19 ರ ಶನಿವಾರದಂದು ಸಿದ್ಧಕಟ್ಟೆ ಕೊಡಂಗೆಯ ವೀರವಿಕ್ರಮ ಕಂಬಳ ಸಮಿತಿ ಪ್ರತೀವರ್ಷ ಆಯೋಜಿಸುವ ಕಂಬಳ ಕರೆಯಲ್ಲಿ ಈ ರೋಟರಿ ಕಂಬಳ ನಡೆಯಲಿದ್ದು ಕುತೂಹಲ ಗರಿಗೆದರಿದೆ. ಸೇವಾ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ರೋಟರಿಯ ಕಾಳಜಿ ಜನಸಮೂಹಕ್ಕೆ ತಲುಪಬೇಕು ಎನ್ನುವುದು ರೋಟರಿ ಪಬ್ಲಿಕ್ ಇಮೇಜ್ ನ ಮುಖ್ಯ ಆಶಯ.

Also Read  ಮಂಗಳೂರು: ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

error: Content is protected !!
Scroll to Top