ವಿಧಾನಪರಿಷತ್ ಚುನಾವಣೆ- ಜಿಲ್ಲೆಯಾದ್ಯಂತ ಮದ್ಯ ನಿಷೇಧ

(ನ್ಯೂಸ್ ಕಡಬ) newskadaba.com ಅ. 17. ಕರ್ನಾಟಕ ವಿಧಾನ ಪರಿಷತ್ – 11 ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆ – 2024 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತ ಹಾಗೂ ಶಾಂತಿಯುತ ವಾತಾವರಣದಲ್ಲಿ ನಡೆಸಲು ಮತದಾನ ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನಗಳು ಮತ್ತು ಮತ ಎಣಿಕೆ ದಿನದಂದು ಹಾಗೂ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಕ್ಟೋಬರ್ 21ರ ಮತದಾನ ನಡೆಯಲಿರುವುದರಿಂದ ಅಕ್ಟೋಬರ್ 19ರಂದು ಸಂಜೆ 4ಗಂಟೆಯಿಂದ ಅಕ್ಟೋಬರ್ 21ರ ಸಂಜೆ 4ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನ ಅಕ್ಟೋಬರ್ 24ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯ ಮುಕ್ತ ದಿನಗಳು ಎಂದು ಘೋಷಿಸಿ ಎಲ್ಲಾ ವಿದಧ ಮದ್ಯದಂಗಡಿಗಳನ್ನುಮುಚ್ಚುವಂತೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶ ಹೊರಡಿಸಿದ್ದಾರೆ.

Also Read  ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್

error: Content is protected !!
Scroll to Top