ಫೆ. 17ರಿಂದ ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ LHB ಬೋಗಿಗಳ ಜೋಡಣೆ- ಈಡೇರಿದ ಕರಾವಳಿಗರ ಬೇಡಿಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಅ. 16. ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣಕ್ಕೆ ಅಗತ್ಯವಾದ LHB ಬೋಗಿಗಳನ್ನು ಮತ್ಸ್ಯ ಗಂಧ ಎಕ್ಸ್ ಪ್ರೆಸ್ ರೈಲಿಗೆ ಫೆಬ್ರವರಿ 17ನೇ ತಾರೀಕಿನಿಂದ ಜೋಡಿಸಲಾಗುತ್ತಿದ್ದು, ಕರಾವಳಿಗರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಜನಪ್ರತಿನಿಧಿಗಳ ಮೂಲಕ ಸಾರ್ವಜನಿಜರು ನಿರಂತರವಾಗಿ ಮತ್ಸಗಂಧ ಹಳೆಯ ಬೋಗಿಯ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರೂ ಇಪ್ಪತ್ತು 25 ವರ್ಷಗಳಷ್ಟು ಹಳೆಯ ಬೋಗಿಗಳಲ್ಲೇ ಮತ್ಸಗಂಧ ರೈಲು ಓಡುತ್ತಿರುವ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಗಮನಕ್ಕೆ ಕಳೆದ ಜುಲೈನಲ್ಲಿ ತಂದಿತ್ತು. ಇದಕ್ಕೆ ಕಾರಣರಾದ ಸಂಸದ ಶ್ರೀನಿವಾಸ್ ಪೂಜಾರಿಯವರಿಗೆ, ವಿವಿಧ ರೈಲು ಹೋರಾಟಗಾರರಿಗೆ ಹಾಗೂ ಸಾಮಾಜಿಕ ಜಾಲತಾಣದ ಸಕ್ರಿಯರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಧನ್ಯವಾದಗಳನ್ನು ತಿಳಿಸಿದ್ದಾರೆ.

Also Read  ಬೆಳ್ತಂಗಡಿ : ಶಬರಿಮಲೆ ಯಾತ್ರಿಕರ ಬಸ್ ಬ್ರೇಕ್ ಫೇಲ್ ➤ ಹಲವರಿಗೆ ಗಾಯ

 

 

 

error: Content is protected !!
Scroll to Top