ಕಡಬ: ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಸಚಿವ ರಮಾನಾಥ ರೈಯವರ ಭಾಷಣಕ್ಕೂ ತಟ್ಟಿತು ವಿದ್ಯುತ್ ಕಡಿತದ ಬಿಸಿ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ಕಡಬ ಭಾಗಕ್ಕೆ  ಕಾಂಗ್ರೆಸ್ ಸರಕಾರ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದು, ಇದನ್ನೆಲ್ಲ ತಿಳಿದುಕೊಂಡು ಮತದಾರರ ಬಳಿ ತಲುಪಿಸುವ ಜಾಣ್ಮೆ ಕಾರ್ಯಕರ್ತರಲ್ಲಿ ಇರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಗುರುವಾರ ಕಡಬದ ಒಕ್ಕಲಿಗ ಗೌಡ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೊೖಲದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಾಲೇಜು, ಶಾಂತಿಮೊಗರು ಸೇತುವೆ, ಮರ್ದಾಳ -ಉಪ್ಪಿನಂಗಡಿ  ರಾಜ್ಯ ಹೆದ್ದಾರಿ ಅಗಲೀಕರಣ, ಕಡಬ ಸಮುದಾಯ ಆಸ್ಪತ್ರೆ ಮೇಲ್ದರ್ಜೆ ಮತ್ತು ನೂತನ ಕಟ್ಟಡ ನಿರ್ಮಾಣ ಮೊದಲಾದ ಜನಪರ ಯೋಜನೆಗಳನ್ನು ಈ ಭಾಗಕ್ಕೆ ನೀಡಲಾಗಿದೆ. ಇದನ್ನೆಲ್ಲ ಜನರ ಬಳಿಗೆ ತಲುಪಿಸುವ ಕಾರ್ಯವಾಗಬೇಕು. ಈ ಭಾಗದ ಅಭಿವೃದ್ಧಿಯಲ್ಲಿ ಎಲ್ಲಾ ಪಾಲು ಕಾಂಗ್ರೇಸ್ಸಿನದ್ದಾಗಿದೆ. ಆದರೆ ಬಿಜೆಪಿ ತಮ್ಮದು ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೇಡಿನ ಸಂಗತಿ. ಇಂತಹ ಕುತಂತ್ರ ರಾಜಕೀಯವನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದಲ್ಲದೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಾರಮತ್ಯ ಮೆರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯು ಬಿಜೆಪಿ ಹಾಗೂ ಇತರೇ ಪಕ್ಷಗಳ ಮತೀಯವಾದಿಗಳ ಅಸಹಿಷ್ಣುತೆಯಿಂದಾಗಿ ದ.ಕ ಜಿಲ್ಲೆ ಕೋಮು ಸಂಘರ್ಷ ಜಿಲ್ಲೆ ಎಂದು ಬಿಂಬಿತವಾಗಿದೆ. ಕಾಂಗ್ರೆಸ್  ಸೌರ್ಹಾದತೆಗೆ ಒತ್ತು ನೀಡುವುದರಿಂದ ಕಾಂಗ್ರೆಸ್ ನಡೆಯನ್ನು ಜನ ಒಪ್ಪಿಕೊಂಡಿದ್ದಾರೆ. ಚುನಾವಣೆ ಪೂರ್ವದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಲಿರುವ ರಾಹುಲ್ ಗಾಂಧಿ ಕಾರ್ಯಕ್ರಮ ಕರಾವಳಿ ಭಾಗದಲ್ಲಿ ಮಹತ್ವ ಪಡೆದಿದೆ. ಈ ಕಾರ್ಯಕ್ರಮಕ್ಕೆ  ಕಡಬ ಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

Also Read  ನಾರಿಶಕ್ತಿ ಪುರಸ್ಕಾರ - ಅರ್ಜಿ ಆಹ್ವಾನ

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಜಿಲ್ಲಾ ಚುನಾವಣಾ ಉಸ್ತುವಾರಿ ಯು.ಪಿ ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಸುಳ್ಯ ಪುತ್ತೂರು ಚುನಾವಣಾ ಉಸ್ತುವಾರಿ ಸವಿತಾ ರಮೇಶ್, ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್, ಎಂ.ಎಸ್. ಮಹಮ್ಮದ್, ಸರ್ವೋತ್ತಮ ಗೌಡ, ಕೆಪಿಸಿಸಿ ಸದಸ್ಯ ಡಾ.ರಘು, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕಡಬ ಬ್ಲಾಕ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರೋಯ್ ಅಬ್ರಹಾಂ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್, ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಮಾತನಾಡುತ್ತಿದ್ದಂತೆ ಆಗಾಗ ವಿದ್ಯುತ್ ಕೈಗೊಡುತ್ತಿದ್ದು ಹಾಗಾಗಿ ಧ್ವನಿವರ್ಧಕ ರಹಿತವಾಗಿ ಭಾಷಣ ಮಾಡುವಂತಾಯಿತು. ಮೈಕ್ ಇಲ್ಲದೆ ಏನು ಮಾತನಾಡುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಕಾರ್ಯಕರ್ತರಿಗೆ ಕಷ್ಟ ಸಾಧ್ಯವಾಯಿತು.

Also Read  ಬೆಳ್ಳಾರೆ ಘಟಕದ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರ ಭೇಟಿ

error: Content is protected !!
Scroll to Top