ಮದ್ಯ ಅಕ್ರಮ ದಾಸ್ತಾನು- ದಾಳಿ

(ನ್ಯೂಸ್ ಕಡಬ) newskadaba.com ಅ.16. ಪಯಸ್ವಿನಿ ರಿಫ್ರೆಶ್‌ ಮೆಂಟ್ ಆಯಂಡ್ ಕೂಲ್ ಜೋನ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 111.750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್‌ನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.


ಸುಳ್ಯ ವಲಯ ವಾಪ್ತಿಯ ಅರಂತೋಡು ಗ್ರಾಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ಪತ್ತೆ ಹಚ್ಚಿ ಅಂಗಡಿ ಮಾಲಿಕ ಮುರಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top