(ನ್ಯೂಸ್ ಕಡಬ) newskadaba.com ಕಡಬ, ಮಾ.15. ಮಹೀಂದ್ರಾ ಎಕ್ಸ್ಯುವಿ ಕಾರು ಹಾಗೂ ಬೈಕ್‌ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಗುರುವಾರ ಅಪರಾಹ್ನ ನಡೆದಿದೆ.
ಗಾಯಾಳುವನ್ನು ಬಲ್ಯ ನಿವಾಸಿ ಬೇಬಿ ಎಂದು ಗುರುತಿಸಲಾಗಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಅದೇ ದಾರಿಯಿಂದಾಗಿ ತುರ್ತು ಕರೆಯ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಕಡಬ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಗಾಯಾಳು ಬೇಬಿ ಅವರನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ತೆರಳಿದ್ದಾರೆ. ಮುಖ, ಕೈ ಗೆ ಗಾಯಗೊಂಡ ಬೇಬಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬದ ಆಂಬ್ಯುಲೆನ್ಸ್ ರವರ ಮಾನವೀಯ ಕಾರ್ಯವು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.