(ನ್ಯೂಸ್ ಕಡಬ) newskadaba.com ಅ. 15. ಹಾಲು, ತುಪ್ಪ, ಮೊಸರು, ಮಜ್ಜಿಗೆ, ಐಸ್ಕ್ರೀಂ, ಸಿಹಿ ಉತ್ಪನ್ನಗಳು, ಬೆಣ್ಣೆ, ಹಾಲಿನ ಪುಡಿ ಹೀಗೆ ಸುಮಾರು 156ಕ್ಕೂ ಹೆಚ್ಚು ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವ ಕೆಎಂಎಫ್ ಪ್ರಸ್ತುತ ನಂದಿನಿ ಬ್ಯಾಂಡ್ ನಡಿಯಲ್ಲಿ ಹೊಸ ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಇದೀಗ ಕೆಎಂಎಫ್ ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಯೊಂದಿಗೆ ಒಂದು ಹೆಜ್ಜೆ ಮುಂದೆ ಹೋಗಿ ಜನರ ಅವಶ್ಯಕತೆಗಳನ್ನು ಮನಗಂಡು ಮಾರುಕಟ್ಟೆಗೆ ನಂದಿನಿ ಬ್ಯಾಂಡ್ ನಡಿ ‘ದೋಸೆ ಹಿಟ್ಟು’ ಪರಿಚಯಿಸಲು ಮುಂದಾಗಿದೆ. ಹೌದು, ಹೆಚ್ಚಾಗಿ ನಗರದಲ್ಲಿ ರೆಡಿ ಟು ಕುಕ್ ವಸ್ತುಗಳನ್ನು ಆರಿಸಿಕೊಳ್ಳುತ್ತಾರೆ ಅದಕ್ಕಾಗಿ,ಕೆಎಂಎಫ್, ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ. ಇದರಿಂದ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.