(ನ್ಯೂಸ್ ಕಡಬ) newskadaba.com ಕಡಬ, ಮಾ.15. ಕಡಬ ತಾಲೂಕು ತಹಶೀಲ್ದಾರರಾಗಿದ್ದ ಜಾನ್ ಪ್ರಕಾಶ್ ರೋಡ್ರಿಗಸ್ ರವರನ್ನು ಉಡುಪಿ ಜಿಲ್ಲೆಯ ಕಾಪು ತಹಶೀಲ್ದಾರರಾಗಿ ವರ್ಗಾಯಿಸಿ ಸರಕಾರ ಆದೇಶ ನೀಡಿದೆ.
ಕಡಬ ತಾಲೂಕು ನೂತನ ತಹಶೀಲ್ದಾರರಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತ್ಯನಾರಾಯಣ ರವರನ್ನು ನೇಮಕಗೊಳಿಸಲಾಗಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರೇಡ್ -1 ಮತ್ತು ಗ್ರೇಡ್-2 ವೃಂದದ 117 ಅಧಿಕಾರಿಗಳನ್ನು ಸರಕಾರ ವರ್ಗಾಯಿಸಿ ಆದೇಶಿಸಿದೆ.