(ನ್ಯೂಸ್ ಕಡಬ) newskadaba.com ಪುತ್ತೂರು, ಅ. 15. ಮನೆ ಮಂದಿ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಕಳವು ನಡೆಸಿದ ಪ್ರಕರಣವು ಕಡಬ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ.
ಸವಣೂರು ನಿವಾಸಿ ಸಲೀಂ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸಲೀಂ ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ಶುಕ್ರವಾರ ಮನೆಗೆ ಬೀಗ ಹಾಕಿ ಪ್ರವಾಸ ಹೋಗಿದ್ದರು. ಪ್ರವಾಸ ಮುಗಿಸಿಕೊಂಡು ರವಿವಾರ ಮಧ್ಯರಾತ್ರಿ ವೇಳೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಮನೆಯ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿರುವುದು ಬೆಳಕಿಗೆ ಬಂದಿತ್ತು. ಮನೆಯೊಳಗೆ ಪ್ರವೇಶಿದಾಗ ಅಲ್ಲಿದ್ದ ಕಪಾಟು ಬಾಗಿಲು ಒಡೆದು ಅದರಲ್ಲಿದ್ದ ಚಿನ್ನ ಹಾಗೂ ನಗದು ದೋಚಿರುವುದು ಕಂಡು ಬಂದಿತ್ತು. ಕಪಾಟಿನಲ್ಲಿದ್ದ 53 ಗ್ರಾಂ ಚಿನ್ನದ ಆಭರಣಗಳು, ಟ್ಯಾಬ್, ಟಿಸೋಟ್ ವಾಚ್ ಹಾಗೂ 30 ಸಾವಿರ ನಗದು ಕಳವಾಗಿದೆ ಎಂದು ಸಲೀಂ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
