ಆರ್‌ಟಿಇ ಸೀಟು ಹಂಚಿಕೆಯನ್ನು ತಾಲೂಕುವಾರು ಮಾಡಬೇಕೆಂದು ಆಗ್ರಹ ► ಇಂದು (ಮಾ.15) ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.15. ಆರ್‌ಟಿಇ ಸೀಟು ಹಂಚಿಕೆಯನ್ನು ತಾಲೂಕುವಾರು ಮಾಡಬೇಕೆಂದು ಆಗ್ರಹಿಸಿ `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆ ಹಾಗೂ `ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ವತಿಯಿಂದ ಮಾ.15 ಗುರುವಾರದಂದು ಬೆಳಿಗ್ಗೆ 10:30 ಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ.

ಆರ್‌ಟಿಐಯಡಿ ಉಚಿತ ಸೀಟು ಹಂಚಿಕೆಯನ್ನು ವಾರ್ಡ್‌ವಾರು, ಗ್ರಾಮವಾರು ಸೀಮಿತಗೊಳಿಸಿದ್ದರಿಂದ ಅನುದಾನ ರಹಿತ ಶಾಲೆಗಳಿಲ್ಲದ ವಾರ್ಡ್ ಹಾಗೂ ಗ್ರಾಮಗಳ ಅರ್ಹ ಬಡ ಮಕ್ಕಳು ಈ ಯೋಜನೆಯಿಂದ ಉಚಿತ ಸೀಟು ಪಡೆಯಲು ವಂಚಿತರಾಗಿದ್ದಾರೆ. 34ನೇ ನೆಕ್ಕಿಲಾಡಿ, ಹಿರೇಬಂಡಾಡಿ, ಇರ್ದೆ, ಕೋಡಿಂಬಾಡಿ ಸೇರಿದಂತೆ ಹಲವು ಶಾಲೆಗಳು ಈ ಯೋಜನೆಯಿಂದ ಹೊರಗುಳಿದಿದ್ದು, ಇಂತಹ ನಿಯಮದಿಂದಾಗಿ ಕೆಲವು ಗ್ರಾಮ, ವಾರ್ಡ್‌ನ ಅರ್ಹ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಆರ್‌ಟಿಇ ಸೀಟು ಹಂಚಿಕೆಯನ್ನು ತಾಲೂಕುವಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ.

Also Read  ನಟ ದರ್ಶನ್ ಆಸ್ಪತ್ರೆಗೆ ದಾಖಲು

error: Content is protected !!
Scroll to Top