ಮಹಿಳೆಯರ ಟಿ20 ವಿಶ್ವಕಪ್; ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಗೆಲುವು

(ನ್ಯೂಸ್ ಕಡಬ) newskadaba.com ಅ. 14 . ಮಹಿಳೆಯರ ಟಿ20 ವಿಶ್ವಕಪ್ ನ 18ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಭಾರತ ತಂಡದ ವಿರುದ್ಧ 9 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಎ ಗುಂಪಿನ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಪಡೆದ ಭಾರತವು ನಾಯಕಿ ಹರ್ಮನ್ ಪ್ರೀತ್ ಕೌರ್ (ಔಟಾಗದೆ 54, 47 ಎಸೆತ, 6 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಆಸ್ಟ್ರೇಲಿಯದ ಪರ ಸೋಫಿ ಮೊಲಿನೆಕ್ಸ್(2-32) ಹಾಗೂ ಅನಬೆಲ್ ಸದರ್ಲ್ಯಾಂಡ್(2-22) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ದೀಪ್ತಿ ಶರ್ಮಾ ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 151 ರನ್ ಗೆ ನಿಯಂತ್ರಿಸಿತು. ಟಾಸ್ ಜಯಿಸಿದ ಆಸ್ಟ್ರೇಲಿಯದ ಹಂಗಾಮಿ ನಾಯಕಿ ತಾಲಿಯಾ ಮೆಕ್ಗ್ರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

Also Read  ಯುವ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ➤ ದ.ಕ ಜಿಲ್ಲಾ ವಕೀಲರಿಂದ ಪ್ರತಿಭಟನೆ

error: Content is protected !!
Scroll to Top