ಪ್ರಲ್ಹಾದ ಜೋಶಿ: ಸೌರ ಶಕ್ತಿ ಹೊಸ ಯೋಜನೆಗೆ 500 ಕೋಟಿ ಮೀಸಲು

(ನ್ಯೂಸ್ ಕಡಬ)newskadaba.com,. 12 ನವದೆಹಲಿ:  ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ ಯೋಜನೆಯಡಿ ಪುನರ್ ಉತ್ಪಾದಿಸುವ ಇಂಧನ ವಲಯಕ್ಕೆ 500 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆಯಡಿ ಹೊಸ ಯೋಜನೆಗಳ ಅನುಷ್ಠಾನ ಮತ್ತು ಘಟಕಕ್ಕಾಗಿ ₹500 ಕೋಟಿ ಇರಿಸಿ ಮೊನ್ನೆಯಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದಿದ್ದಾರೆ. ಸ್ಕೀಮ್ ಕಾಂಪೊನೆಂಟ್ ‘ಇನ್ನೋವೇಟಿವ್ ಪ್ರಾಜೆಕ್ಟ್’ನಡಿ ರೂಫ್‌ಟಾಪ್ ಸೌರ ತಂತ್ರಜ್ಞಾನ, ವ್ಯವಹಾರ ಮಾದರಿಗಳು ಮತ್ತು ಏಕೀಕರಣ ತಂತ್ರಗಳಲ್ಲಿ ಪ್ರಗತಿಗೆ ಈ ಮೊತ್ತ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ ಹೊಸ ಯೋಜನೆಗಳ ಘಟಕಕ್ಕಾಗಿ ಸ್ಕೀಮ್ ಇಂಪ್ಲಿಮೆಂಟೇಶನ್ ಏಜೆನ್ಸಿ ಆಗಿ ಕಾರ್ಯ ನಿರ್ವಹಿಸುತ್ತದೆ. ಆಯ್ದ ಪ್ರಾಜೆಕ್ಟ್‌ಗಳು ಯೋಜನಾ ವೆಚ್ಚದ ಶೇ.60ರಷ್ಟು ಅಥವಾ ₹30 ಕೋಟಿ, ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆರ್ಥಿಕ ನೆರವು ಪಡೆಯುತ್ತದೆ ಎಂದು ತಿಳಿಸಿದ್ದಾರೆ.

Also Read  ಮುಂದಿನ ಎರಡು ವರ್ಷಗಳಲ್ಲಿ ಕಿದು ಸಿಪಿಸಿಆರ್ಐ ವಿಶ್ವ ವಿದ್ಯಾಲಯವಾಗಿ ಅಭಿವೃದ್ಧಿ ➤ ಕೃಷಿ ಮೇಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಭರವಸೆ

error: Content is protected !!
Scroll to Top