ಪಾಕ್‌ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಉಗ್ರ ಸಂಘಟನೆ ಮುಖ್ಯಸ್ಥನ ವಿರುದ್ಧ ಎಫ್ ಐಆರ್

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 12. ಕೆಲವು ತಿಂಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಮುಖಂಡ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಸಂಘಟನೆ ಮುಖ್ಯಸ್ಥ ವಾಧವಾ ಸಿಂಗ್ ಮತ್ತು ಇತರ ಐವರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ.

ಏಪ್ರಿಲ್ 13ರಂದು ಪಂಜಾಬ್‌ನ ರೂಪನಗರ ಜಿಲ್ಲೆಯ ನಂಗಲ್‌ನಲ್ಲಿರುವ ಅವರ ಮಿಠಾಯಿ ಅಂಗಡಿಯಲ್ಲಿ ಬಿಕೆಐ ಮಾಡ್ಯೂಲ್‌ಗೆ ಸೇರಿದ ಭಯೋತ್ಪಾದಕರು ಬಗ್ಗಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶುಕ್ರವಾರ ಸಲ್ಲಿಸಲಾದ NIA ಚಾರ್ಜ್‌ಶೀಟ್‌ನಲ್ಲಿ ವಾಧವಾ ಸಿಂಗ್ ಅಲಿಯಾಸ್ ಬಬ್ಬರ್, ಇಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ಮೂವರು ಬಂಧಿತ ಆರೋಪಿಗಳನ್ನು ಭೀಕರ ಹತ್ಯೆಯ ಪ್ರಮುಖ ಅಪರಾಧಿಗಳು ಎಂದು ಹೆಸರಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Also Read  ಕಾರು ಅಪಘಾತ: 4ನೇ ತರಗತಿ ವಿದ್ಯಾರ್ಥಿ ಮೃತ್ಯು..!

 

error: Content is protected !!
Scroll to Top