T20 ವಿಶ್ವಕಪ್ ಫೈನಲ್ ಕುರಿತು ಮೊದಲ ಬಾರಿಗೆ ಮೌನ ಮುರಿದ ರಿಷಬ್ ಪಂತ್

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 12.  ದಕ್ಷಿಣ ಆಫ್ರಿಕಾ ವಿರುದ್ಧದ ICC T20 WorldCup 2024 Final ಪಂದ್ಯದ ನಿರ್ಣಾಯಕ ಘಟದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ನಾಟಕವಾಡಿದ್ದರು ಎಂಬ ನಾಯಕ ರೋಹಿತ್ ಶರ್ಮಾ ಹೇಳಿಕೆಗೆ ಇದೇ ಮೊದಲ ಬಾರಿಗೆ ರಿಷಬ್ ಪಂತ್ ಮೌನ ಮುರಿದಿದ್ದಾರೆ.

ಪಂದ್ಯ ಇನ್ನೇನು ಕೈ ಜಾರುತ್ತಿದೆ ಎನ್ನುತ್ತಿರುವಾಗ ನಾವೆಲ್ಲರೂ ಫೀಲ್ಡಿಂಗ್ ಸೆಟ್ ಮಾಡುವುದರಲ್ಲಿ ಬಿಸಿಯಾಗಿದ್ದೆವು. ಆದರೆ ಈ ಹಂತದಲ್ಲಿ ಪಂತ್ ಕೆಳಗೆ ಕುಸಿದಿದ್ದರು. ಕಾಲಿನ ನೋವಿನ ನಾಟಕ ಮಾಡಿ ಕೆಳಗೆ ಬಿದ್ದಿದ್ದರು. ಫಿಸಿಯೋ ಚಿಕಿತ್ಸೆ ಮಾಡುತ್ತಿದ್ದರು. ಇದರಿಂದ ನಮಗೆ 3 ರಿಂದ 5 ನಿಮಿಷಗಳ ಸಮಯ ಸಿಕ್ಕಿತ್ತು. ಇದರಿಂದ ದಕ್ಷಿಣ ಆಫ್ರಿಕಾದ ಮೊಮೆಂಟಮ್ ಬದಲಾಗಿತ್ತು. ಇದರ ಲಾಭ ತಂಡಕ್ಕಾಯಿತು ಎಂದು ರೋಹಿತ್ ಶರ್ಮಾ ಹೇಳಿದರು.

Also Read  ಈ 8 ರಾಶಿಯವರಿಗೆ ವಿವಾಹ ಯೋಗ ವ್ಯಾಪಾರ,ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

 

error: Content is protected !!
Scroll to Top