ಹರಿಯುವ ಹಳ್ಳಕ್ಕೆ ಹಾರಿದ ಮಹಿಳೆಯ ರಕ್ಷಣೆ

(ನ್ಯೂಸ್ ಕಡಬ) newskadaba.com ಕೊಪ್ಪಳ, ಅ. 12.  ಹಿರೇಹಳ್ಳಕ್ಕೆ ಹಾರಿ ಮಹಿಳೆಯನ್ನು ಗ್ರಾಮದ ಯುವಕರು ರಕ್ಷಿಸಿರುವ ಘಟನೆ ನಗರದ ಭಾಗ್ಯನಗರದಲ್ಲಿ ಇಂದು ನಡೆದಿದೆ. ಹಳ್ಳಕ್ಕೆ ಹಾರಿದ ಮಹಿಳೆಯನ್ನು ತಾಲೂಕಿನ ಓಜನಹಳ್ಳಿ ಗ್ರಾಮದ ಭರಮಮ್ಮ ಮಡಿವಾಳರ್ ಎಂದು ಗುರುತಿಸಲಾಗಿದೆ.


ತಡರಾತ್ರಿಯಿಂದಲೇ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುಗಡೆ ಮಾಡಿದ್ದು, ಬೆಳಗ್ಗೆ ಹೊತ್ತಿಗೆ ಹಳ್ಳದ ಎರಡು ದಂಡೆಯ ಮೇಲೆ ನೀರು ಹರಿಯುತ್ತಿದೆ. ಈ ವೇಳೆ ಸೀರೆ ಹಿಂಡಿಕೊಂಡು ಬರುವ ನೆಪದಲ್ಲಿ ಹಳ್ಳದ ದಡಕ್ಕೆ ತೆರಳಿದ ಭರಮಮ್ಮ, ಏಕಾಏಕಿ ಹರಿಯುತ್ತಿದ್ದ ಹಿರೇಹಳ್ಳಕ್ಕೆ ಹಾರಿದ್ದಾರೆ. ಹಳ್ಳದಲ್ಲಿ ಸ್ವಲ್ಪ ದೂರ ಕೊಚ್ಚಿಹೋಗಿ, ಮುಳ್ಳುಕಂಟಿಗಳಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

Also Read  ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ

 

 

error: Content is protected !!
Scroll to Top