ಪಾಕ್ ಡ್ರೋನ್ ನಲ್ಲಿ ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ವೇಳೆ ಹೊಡೆದುರುಳಿಸಿದ ಬಿಎಸ್ಎಫ್

(ನ್ಯೂಸ್ ಕಡಬ)newskadaba.com,. 12 ಚಂಡೀಘಡ: ಪಂಜಾಬ್ ನ ಫಿರೋಜ್ ಪುರದಲ್ಲಿ ಹೆರಾಯಿನ್ ಮತ್ತು ಪಿಸ್ತೂಲ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನುಗಡಿ ಭದ್ರತಾ ಪಡೆ ಹೊಡೆದುರುಳಿಸಿದ್ದು ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್, ಚೀನಾದಲ್ಲಿ ತಯಾರಾದ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ 500 ಗ್ರಾಂ ಹೆರಾಯಿನ್, ಪಿಸ್ತೂಲ್ ಹೊತ್ತೊಯ್ಯುತ್ತಿತ್ತು. ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಂಜಾಬ್ ಪೊಲೀಸ್ ಪಡೆ ತಡೆದಿವೆ. ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು ಅದನ್ನು ಕೆಳಗಿಳಿಸಿದರು ಎಂದು ತಿಳಿಸಿದೆ. ಬಿಎಸ್‌ಎಫ್ ಈ ಹಿಂದೆ ಪಂಜಾಬ್‌ನಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾರ್ಚ್‌ನಲ್ಲಿ ಅಮೃತಸರ ಬಳಿ ಪಂಜಾಬ್ ಪೊಲೀಸರು ಎರಡು ಪಾಕಿಸ್ತಾನಿ ನಿರ್ಮಿತ ಡ್ರೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಫೆಬ್ರವರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಚೀನಾ ನಿರ್ಮಿತ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.

Also Read  ಉಪ್ಪಿನಂಗಡಿ: ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ನಗದು ಕಳವು

error: Content is protected !!
Scroll to Top