ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ..!

Crime

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ. 12.   ಹಳೆ ದ್ವೇಷಕ್ಕೆ ಯುವಕನ‌ನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದ ಘಟನೆ ಗೋಪನಕೊಪ್ಪದ ಸಂತೋಷನಗರದ ಬಳಿ ಶುಕ್ರವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವು ಚಂದ್ರಶೇಖರ್ ಕಮ್ಮಾರ (23) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸುದೀಪ್ ರಾಯಾಪುರ ಎಂದು ಗುರುತಿಸಲಾಗಿದೆ.

ಆಯುಧ ಪೂಜೆ ದಿನವೇ ಚಾಕುವಿನಿಂದ ಇರಿದು ಯುವಕನನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದು, ಸುಮಾರು ರಾತ್ರಿ 11.15 ಗಂಟೆಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿವು ಕಮ್ಮಾರನನ್ನ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Also Read  2023-2024 ಬಜೆಟ್ ಮಂಡನೆ !      ➤ ಬಜೆಟ್’ನ ಮುಖ್ಯಾಂಶಗಳು..!

 

error: Content is protected !!
Scroll to Top