ದಸರಾ: ಮೈಸೂರು-ಮಂಗಳೂರು ವಾಹನ ಸಂಚಾರದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಅ. 12. ನಾಡಹಬ್ಬ ಮೈಸೂರು ದಸರಾದ ಹಿನ್ನೆಲೆಯಲ್ಲಿ ಇಂದು (ಅ. 12) ಮಧ್ಯಾಹ್ನದಿಂದ ಭಾನುವಾರ ಬೆಳಗ್ಗಿನವರೆಗೆ ಮೈಸೂರು ಕಡೆಯಿಂದ  ಮಂಗಳೂರು ಕಡೆಗೆ ತೆರಳುವ ವಾಹನಗಳ ಮಾರ್ಗ ಬದಲಾಯಿಸಿ ಮಡಿಕೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮೈಸೂರಿನಿಂದ ಮಂಗಳೂರು, ಸುಳ್ಯ, ಪುತ್ತೂರು ಕಡೆಗೆ ತೆರಳುವ ವಾಹನ ಸವಾರರು ಬಿಳಿಕೆರೆ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ಕೆ.ಆರ್.ನಗರ ಮಾರ್ಗವಾಗಿ ಹಾಸನ ಕಡೆಯಿಂದ ತೆರಳಬೇಕು. ಹಾಗೂ ಹುಣಸೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಕಟ್ಟೆಮಳಲವಾಡಿ, ಕೆ.ಆರ್.ನಗರ ಮಾರ್ಗವಾಗಿ ಹಾಸನ ಕಡೆಯಿಂದ ತೆರಳುವಂತೆ ಮಡಿಕೇರಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಸುಳ್ಯ: ನಿವೃತ್ತ ಫಾರೆಸ್ಟರ್ ಅಧಿಕಾರಿಯ ಪುತ್ರ ನೇಣುಬಿಗಿದು ಆತ್ಮಹತ್ಯೆ

 

error: Content is protected !!
Scroll to Top