ಸಹೋದ್ಯೋಗಿಗೆ ʼಆಸಿಡ್‌ʼ ಮೆಸೇಜ್‌ ಮಾಡಿ ಕೆಲಸ ಕಳೆದುಕೊಂಡ ಯುವಕ

(ನ್ಯೂಸ್ ಕಡಬ) newskadaba.com ಬೆಂಗಳೂರು,ಅ. 12.   ಒಂದು ಮೆಸೇಜ್‌ನಿಂದ ಯುವಕನೊಬ್ಬ ತನ್ನ ಕೆಲಸವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ತನ್ನ ಸಹೋದ್ಯೋಗಿ ಮಹಿಳೆಯ ಬಟ್ಟೆ ಧರಿಸುವಿಕೆಯ ಬಗ್ಗೆ ಕಮೆಂಟ್‌ ಮಾಡಿದ್ದು, ಈ ಕುರಿತು ದೂರು ದಾಖಲಿಸಲಾಗಿತ್ತು.

ಮಹಿಳೆಗೆ ಆಸಿಡ್ ಹಾಕುತ್ತೀನಿ ಎಂದ ಯುವಕ ನಿಖಿತ್ ಶೆಟ್ಟಿ ಎಂಬಾತನ ವಿರುದ್ಧ ಆಕೆಯ ಪತಿ ಪೊಲೀಸರಿಗೆ ಎಕ್ಸ್‌ ನಲ್ಲಿ ಪೋಸ್ಟ್ ಮಾಡುವ ಮೂಲಕ ದೂರು ನೀಡಿದ್ದರು. ಯುವಕ ನಿಖಿತ್ ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಸಹೋದ್ಯೋಗಿ ಮಹಿಳೆಯ ಬಗ್ಗೆ ಆಕೆಯ ಪತಿ ಶಹಬಾಝ್ ಅನ್ಸರ್‌ಗೆ ಮೆಸೇಜ್‌ ಮಾಡಿದ್ದ. ನಿನ್ನ ಪತ್ನಿಗೆ ನೀಟಾಗಿ ಬಟ್ಟೆ ಹಾಕೋದಕ್ಕೆ ಹೇಳು, ಇಲ್ಲದಿದ್ದಲ್ಲಿ ಆಸಿಡ್ ಹಾಕ್ತಿನಿ ಎಂದು ಮೆಸೇಜ್ ಮಾಡಿದ್ದ. ಇದಕ್ಕೆ ಸ್ಪಂದಿಸಿದ ಕಂಪನಿ ಅಧಿಕಾರಿಗಳು ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ನಿಖಿತ್‌ ಅವರನ್ನು ಐದು ವರ್ಷಗಳ ಕಾಲ ಕಂಪನಿ ಟರ್ಮಿನೇಷನ್ ಮಾಡಿದೆ. ಹಾಗೂ ಆತನ ವಿರುದ್ಧ ದೂರು ಕೂಡ ದಾಖಲು ಮಾಡುತ್ತೇವೆ ಎಂದು ಕಂಪನಿ ತಿಳಿಸಿದೆ.

Also Read  ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

 

error: Content is protected !!
Scroll to Top