ಉಪ್ಪಿನಂಗಡಿ: ಸಿಡಿಲು ಬಡಿದು ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.14. ವರ್ಷದ ಮೊದಲ ಮಳೆಗೆ ಬಂದಂತಹ ಭಾರೀ ಸಿಡಿಲಿನ ಆಘಾತಕ್ಕೆ ಮೂರು ಮನೆಗಳಲ್ಲಿನ ಐವರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಬಂದಾರು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ಗಾಯಾಳುಗಳನ್ನು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ದರ್ಖಾಸು ನಿವಾಸಿಗಳಾದ ಅಭಿಲಾಷ್, ಆನಂದ, ಪತ್ನಿ ಮೀನಾಕ್ಷಿ, ಪುತ್ರ ಪೂರ್ಣೇಶ್ ಹಾಗೂ ಯೂಸುಫ್ ಎಂಬವರ ಪುತ್ರಿ ಉಮೈಮ ಎಂದು ಗುರುತಿಸಲಾಗಿದೆ. ರಾತ್ರಿ ಇವರೆಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ ಭಾರೀ ಸಿಡಿಲೊಂದು ಮನೆ ಪಕ್ಕದ ಮರಕ್ಕೆ ಬಡಿದಿದ್ದು, ಇದರ ಆಘಾತಕ್ಕೆ ಒಟ್ಟು ಐವರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಉಪ್ಪಿನಂಗಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ಆಘಾತಕ್ಕೆ ಮೂರೂ ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.

Also Read  ಉಡುಪಿಗೆ ಮುಂಬೈ ಆಘಾತ: ಜಿಲ್ಲೆಯ 27 ಮಂದಿಗೆ ಸೋಂಕು

error: Content is protected !!
Scroll to Top