ಅರಬ್ಬಿ ಸಮುದ್ರದಲ್ಲಿ ಮತ್ತೆ ಸೈಕ್ಲೋನ್: ಇನ್ನೂ 4 ದಿನ ಮಳೆ ಸಾಧ್ಯ

(ನ್ಯೂಸ್ ಕಡಬ)newskadaba.com,. 12 ಮಂಗಳೂರು : ಕರ್ನಾಟಕ ಮತ್ತು ಗೋವಾ ಕರಾವಳಿಯ ಸಮೀಪ ಮಧ್ಯ ಪೂರ್ವ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಉಂಟಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೂರ್ವದಲ್ಲಿ ಬಂಗಾಳಕೊಲ್ಲಿಯ ನೈಋತ್ಯ ಕರಾವಳಿಯ ತಮಿಳುನಾಡು ಕರಾವಳಿಯ ಬಳಿ ಸೈಕ್ಲೋನಿಕ್ ಪರಿಚಲನೆ ರೂಪುಗೊಳ್ಳುತ್ತಿದೆ.ಇನ್ನೊಂದೆಡೆ ಈಶಾನ್ಯ ಅಸ್ಸಾಂ ಬಳಿಯೂ ಕರ್ನಾಟಕ, ಗೋವಾ ಕರಾವಳಿಯಲ್ಲಿ ಚಂಡಮಾರುತ ಮಾದರಿ ಕಾಣಿಸಿಕೊಂಡಿದ್ದು ಇದರ ಪರಿಣಾಮವಾಗಿ ದಕ್ಷಿಣ ಗುಜರಾತ್, ಮಹಾರಾಷ್ಟ್ರ, ಉತ್ತರ ಮತ್ತು ಒಳ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

error: Content is protected !!

Join the Group

Join WhatsApp Group