ಡಿ.ಕೆ.ಎಸ್.ಸಿ ಪಾಣೆಮಂಗಳೂರು: ನೂತನ ಶಾಖೆಯ ಶುಭಾರಂಭ

(ನ್ಯೂಸ್ ಕಡಬ) newskadaba.com ಅ. 12. ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿ ಮಂಗಳೂರು ಇದರ ಅಧೀನದಲ್ಲಿ ಪಾಣೆಮಂಗಳೂರು ಶಾಖೆಯು ಎಸ್.ಎಸ್.ಅಡಿಟೋರಿಯಂ ಆಲಡ್ಕ ಇದರ ಸಭಾಂಗಣದಲ್ಲಿ ಡಿ.ಕೆ.ಎಸ್.ಸಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಹು ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಅಲ್ ಹೈದ್ರೋಸಿ, ಕುಂಬೋಳ್ ರವರ ಘನ ಅಧ್ಯಕ್ಷತೆಯಲ್ಲಿ ಶುಭಾರಂಭಗೊಂಡಿತು.

ಕಾರ್ಯಕ್ರಮದಲ್ಲಿ ಮುಹಮ್ಮದ್ ಹಾಶಿಂ ಕಿರಾಅತ್ ಪಠಿಸಿದರು. ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಮುಹಮ್ಮದ್ ಅಲ್ ಖಾಸಿಮಿ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದ್ರಿಯಾ ಜುಮ್ಮಾ ಮಸೀದಿ ಆಲಡ್ಕ ಇದರ ಖತೀಬರಾದ ಬಹು ಅಶ್ರಫ್ ಸಖಾಫಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಬೊಳ್ಳಾಯಿ ಇದರ ಖತೀಬರಾದ ಬಹು ಉಮರ್ ಸಖಾಫಿ ಮಿತ್ತೂರುರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಟಿ.ಎಸ್ ಹನೀಫ್ ಹಾಜಿ ಆಫ್ರಿಕ, ಮುಹಮ್ಮದ್ ಇಂಜಿನಿಯರ್, ಹಮೀದ್ ಹಾಜಿ, ಮಹಮ್ಮದ್ ಹಾಜಿ ಗುಡ್ಡೆಯಂಗಡಿ, ಡಿ.ಕೆ.ಎಸ್.ಸಿ ಹಿರಿಯ ನೇತಾರ ಉಮರ್ ಹಾಜಿ ಮುಕ್ವೆ ಉಪಸ್ಥಿತರಿದ್ದರು. ಝೈನುದ್ದೀನ್ ಮುಕ್ವೆ, ಅಹ್ಮದ್ ಶರೀಫ್ ಬಜ್ಪೆ, ಅಬ್ದುಲ್ ಸಲಾಂ ಪಾಣೆಮಂಗಳೂರು, ಅನ್ವರ್ ಹುಸೈನ್ ಗೂಡಿನ ಬಳಿ, ಅಬ್ದುಲ್ ರಝಾಕ್ ಅಳಕೆಮಜಲು, ಇ.ಕೆ.ಇಬ್ರಾಹಿಂ ಕಿನ್ಯ, ಇಸ್ಮಾಯಿಲ್ ಶಾಫಿ ವಿಟ್ಲ ಹಾಜರಿದ್ದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಕೆ.ಸಿ.ಇಸ್ಮಾಯಿಲ್ ಹಾಜಿ ಕಿನ್ಯರವರ ನೇತೃತ್ವದಲ್ಲಿ ಈ ಕೆಳಗಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉಮರ್ ಸಖಾಫಿ ಮಿತ್ತೂರು ಪ್ರ.ಕಾರ್ಯದರ್ಶಿಯಾಗಿ ಸಿರಾಜ್ ಮೆಲ್ಕಾರ್, ಕೋಶಾಧಿಕಾರಿಯಾಗಿ ಶರೀಫ್ ಮಾರ್ನಬೈಲ್, ಸಹಾಯಕ ಕೋಶಾಧಿಕಾರಿಯಾಗಿ ಇಮ್ರಾನ್ ಪಾಣೆಮಂಗಳೂರು, ಸಂಘಟನಾ ಕಾರ್ಯದರ್ಶಿಯಾಗಿ ಮುಬಾರಕ್ ಕಾರಾಜೆ, ಮೀಡಿಯಾ ಇನ್ ಚಾರ್ಜ್ ಬಶೀರ್ ಬೊಳ್ಳಾಯಿ, ಮುಖ್ಯ ಸಲಹೆಗಾರರಾಗಿ ಅಶ್ರಫ್ ಸಖಾಫಿ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಇಂಜೀನಿಯರ್, ಹನೀಫ್ ಚೇರ್ಮಾನ್ ಸಜೀಪ, ಜೊತೆ ಕಾರ್ಯದರ್ಶಿಗಳಾಗಿ ಬಿ.ಬಿ.ರಝಾಕ್ ಬೊಳ್ಳಾಯಿ, ರಫೀಕ್ ಕಾರಾಜೆ, ಯಾಕೂಬ್ ಬಂಟ್ವಾಳ, ಸಂಚಾಲಕರಾಗಿ ಮುಹಮ್ಮದ್ ಹಾಜಿ ಗುಡ್ಡೆಯಂಗಡಿ, ಅಬೂಬಕ್ಕರ್ ಗುಡ್ಡೆ ಅಂಗಡಿ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಪ್ರಾರಂಭದಲ್ಲಿ ಡಿ.ಕೆ.ಎಸ್.ಸಿ ದಮಾಮ್ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಇಸಾಕ್ ಬೊಳ್ಳಾಯಿ ಸ್ವಾಗತಿಸಿ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!