ಮಾದಕ ವ್ಯಸನ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸೋಣ- ರೆ.ಫಾ.ಜೈಸನ್ ಸಮನ್

(ನ್ಯೂಸ್ ಕಡಬ) newskadaba.com ಅ. 11. ಮಾದಕ ವ್ಯಸನ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸೋಣ ಎಂದು ಸಂಸ್ಥೆಯ ನಿರ್ದೇಶಕರಾದ ರೆ.ಫಾ.ಜೈಸನ್ ಸೈಮನ್ ಓಐಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಬೆಥನಿ ಐಟಿಐಯ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ.ವರ್ಗೀಸ್ ಕೈಪನಡುಕ ಓ ಐ ಸಿ  ಇವರು ಮಾತನಾಡಿ, ಆಯ್ಕೆಯಾದವರು ಮಾತ್ರವಲ್ಲ ಎಲ್ಲಾ ವಿದ್ಯಾರ್ಥಿಗಳು ಸ್ವತಃ ನಾಯಕರಾಗಬೇಕು. ಅವರವರ ಏಳಿಗೆಗೆ ಅವರವರೇ ಪ್ರಯತ್ನಿಸಬೇಕು ಎಂಬ ಮಾತುಗಳನ್ನಾಡಿ ಶುಭ ಹಾರೈಸಿದರು. ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್ ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೋಷನ್ ಹೆಚ್, ಉಪಾಧ್ಯಕ್ಷರಾದ ಸ್ವಸ್ತಿಕ್, ಜನರಲ್ ಸೆಕ್ರೆಟರಿ ಅಭಿಷೇಕ್, ಸಾಂಸ್ಕೃತಿಕ ಕಾರ್ಯದರ್ಶಿ ಮಹಮ್ಮದ್ ಮಿದ್ ಲಾಜ್, ಕ್ರೀಡಾ ಕಾರ್ಯದರ್ಶಿ ಪವನ್ ಎಸ್ ಇವರಿಗೆ ಪ್ರಮಾಣವಚನ ಬೋಧಿಸಿದರು.

Also Read  ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಬೇಡಿಕೆ ಶಾಸಕ ವೇದವ್ಯಾಸ ಕಾಮತ್

ನೂತನ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಅಧ್ಯಾಪಕರುಗಳ ಕಿರು ಪರಿಚಯವನ್ನು ಸಿಬ್ಬಂದಿ ವರ್ಗದ ಕಾರ್ಯದರ್ಶಿಯಾದ ಹರಿಪ್ರಸಾದ್ ರೈ ನೀಡಿದರು. ಸಂಸ್ಥೆಯ ತರಬೇತಿ ಅಧಿಕಾರಿಯಾದ ಜಾನ್ ಪಿ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿಯಾದ ಸುನಿಲ್ ಜೋಸೆಫ್ ಕಾರ್ಯಕ್ರಮಕ್ಕೆ ಎಲ್ಲರನ್ನೂ  ಸ್ವಾಗತಿಸಿದರು ಹಾಗೂ ಫಿಟ್ಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿಯಾದ ಶಿವಾನಂದ ಎಸ್ ವಂದನಾರ್ಪಣೆಗೈದರು. ಕಾರ್ಯಾಗಾರ ಮತ್ತು ಲೆಕ್ಕಾಚಾರ ವಿಭಾಗದ ಕಿರಿಯ ತರಬೇತಿ ಅಧಿಕಾರಿಯಾದ ಸಂತೋಷ್ ಪಿಂಟೋ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

 

error: Content is protected !!
Scroll to Top