(ನ್ಯೂಸ್ ಕಡಬ) newskadaba.com ಅ. 11. ಹಲವೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಕಡಬ ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿರುವ ಘಟನೆ ನಡೆದಿದೆ.
ಬಂಧಿತನನ್ನು ಕಡಬ ತಾಲೂಕು ಕುಂತೂರು ನಿವಾಸಿ ರಾಝಿಕ್ ಅಲಿಯಾಸ್ ಎರ್ಮಾಳ ರಾಝಿಕ್ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಅ. 10ರಂದು ತಮಿಳುನಾಡಿನ ಕೊಯಮತ್ತೂರಿನಿಂದ ಪೊಲೀಸರು ದಸ್ತಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ವಿರುದ್ದ ದ.ಕ ಜಿಲ್ಲೆಯ ಕಡಬ ಠಾಣೆಯಲ್ಲಿ ಗಲಾಟೆ ಹಾಗೂ ಬೆದರಿಕೆ ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ ಸಶಸ್ತ್ರ ಕಾಯ್ದೆ, ಹಾಗೂ ಎನ್ ಡಿ ಪಿ ಎಸ್ ಕಾಯ್ದೆಯಡಿ ಕೇಸ್, ಸುಳ್ಯ, ಬಂಟ್ವಾಳ ನಗರ ಠಾಣೆ, ಕೊಣಾಜೆ, ಪುಂಜಾಲಕಟ್ಟೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ವಾರಂಟ್ ಆಗಿತ್ತು. ಉಪ್ಪಿನಂಗಡಿ ವೃತ್ತ ನಿರೀಕ್ಷಕರ ನಿರ್ದೇಶನಂತೆ ಕಡಬ ಎಸ್.ಐ ಅಭಿನಂದನ್ ಅವರ ಮಾರ್ಗದರ್ಶನದಲ್ಲಿ ಠಾಣಾ ಎಚ್.ಸಿ ರಾಜು ನಾಯ್ಕ್, ಪಿಸಿ ಸಿರಾಜುದ್ದೀನ್, ಪಿಸಿ ಪ್ರವೀಣ್ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.