(ನ್ಯೂಸ್ ಕಡಬ)newskadaba.com, ಅ. 11 ಸ್ವೀಡನ್ : ಅಣ್ವಸ್ತ್ರ ಮುಕ್ತ ಜಗತ್ತನ್ನು ಸೃಷ್ಟಿಸುವ ಪ್ರಯತ್ನಗಳಿಗಾಗಿ ಜಪಾನಿನ ಸಂಸ್ಥೆ ನಿಹಾನ್ ಹಿಡಂಕ್ಯೊಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಈ ಸಂಘಟನೆಯು 1945ರಲ್ಲಿ ಜಪಾನ್ನ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ನಡೆದ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರ ತಳಮಟ್ಟದ ಆಂದೋಲನವಾಗಿದ್ದು, ಇದನ್ನು ಹಿಬಾಕುಶಾ ಎಂದೂ ಕರೆಯಲಾಗುತ್ತದೆ. ಇದು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎನ್ನುವುದನ್ನು ಸಾಕ್ಷಿ ಮೂಲಕ ಪ್ರದರ್ಶಿಸಲು ಶ್ರಮಿಸುತ್ತಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.