ಪುತ್ತೂರು: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

(ನ್ಯೂಸ್ ಕಡಬ)newskadaba.com ಪುತ್ತೂರು, . 11.  ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಸೃಷ್ಟಿಯಾಗಿದ್ದು, ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 10ರೂ.ನಂತೆ ಏರಿಕೆ ಕಂಡಿದೆ.

ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 310 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆಗೆ 350ರೂ. ಇತ್ತು. ಅ.10ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 325 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ ಕೆಲವೆಡೆ 355ರಿಂದ 360 ರೂ. ತನಕವೂ ಬೇಡಿಕೆ ಇತ್ತು. ಹೊಸ ಅಡಿಕೆ ಕೊರತೆ ಕಾರಣ ಸಿಂಗಲ್ ಚೋಲ್ ಗೆ ಬೇಡಿಕೆ ವೃದ್ಧಿಯಾಗಿದ್ದು, ಧಾರಣೆಯು 410ರಿಂದ 415 ರೂ. ಗೆ ಏರಿಕೆ ಕಂಡಿದೆ.

Also Read  ಬಶೀರ್ ಅಂತ್ಯಕ್ರಿಯೆಗೆ ಹರಿದು ಬಂತು ಜನಸಾಗರ ► ಸರ್ವ ಧರ್ಮೀಯರಿಂದ ಅಂತಿಮ ವಿದಾಯ

error: Content is protected !!
Scroll to Top