ಕುಕ್ಕೇ ಸುಬ್ರಹ್ಮಣ್ಯಕ್ಕೆ ಎರಡೂವರೆ ಕೋಟಿಯ ಬ್ರಹ್ಮರಥ ಸಮರ್ಪಿಸಲಿರುವ ► ಮುತ್ತಪ್ಪ ರೈ ಪಾಲುದಾರಿಕೆಯಲ್ಲಿ ಕಡಬದ ಉದ್ಯಮಿ ಅಜಿತ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಮಾ.14. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರಾವಳಿ ಮೂಲದ, ಬೆಂಗಳೂರಿನ ಉದ್ಯಮಿಗಳಿಬ್ಬರು ಪಾಲುದಾರಿಕೆಯಲ್ಲಿ ಎರಡೂವರೆ ಕೋಟಿ ರೂ. ಮೌಲ್ಯದ ಬ್ರಹ್ಮರಥವನ್ನು ನೀಡಲಿದ್ದಾರೆ.

ಬೆಂಗಳೂರಿನ ಬಿಡದಿ ರಿಯಾಲಿಟಿ ವೆಂಚರ್ ಪಾಲುದಾರರಾದ ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಹಾಗೂ ಕಡಬದ ಅಜಿತ್ ಶೆಟ್ಟಿ ಪಾಲುದಾರಿಕೆಯಲ್ಲಿ ಬ್ರಹ್ಮರಥವನ್ನು ನೀಡಲು ನಿರ್ಧರಿಸಿದ್ದು, ಅದರಂತೆ ಮಾರ್ಚ್ 15 ಗುರುವಾರದಂದು ಅಮೃತಸಿದ್ಧಿ ಯೋಗದ ಶುಭ ಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವೀಳ್ಯದೆಲೆ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಶಿಲ್ಪ ಗುರು ಪ್ರಶಸ್ತಿ ವಿಜೇತ ಖ್ಯಾತ ಶಿಲ್ಪಿ, ಕುಂದಾಪುರ ತಾಲೂಕಿನ ಕೋಟಾ ನಿವಾಸಿ ಲಕ್ಷ್ಮೀ ನಾರಾಯಣ ಆಚಾರ್ಯರ ನೇತೃತ್ವದಲ್ಲಿ ದಾಂಡೇಲಿ ಅರಣ್ಯದಿಂದ ತರಲಾಗುವ ಮರದಲ್ಲಿ 64.10 ಅಡಿ ಉದ್ದ ಮತ್ತು 18 ಅಡಿ ಅಗಲದ ಬ್ರಹ್ಮರಥ ನಿರ್ಮಾಣವಾಗಲಿದೆ. ಈ ಹಿಂದೆ ಉದ್ಯಮಿ ಮುತ್ತಪ್ಪ ರೈಯವರು ತಮ್ಮ ಹುಟ್ಟೂರಾದ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಒಂದು ಕೋಟಿ ಮೌಲ್ಯದ ಬ್ರಹ್ಮರಥವನ್ನು ಕೊಟ್ಟು ಗಮನ ಸೆಳೆದಿದ್ದರು. ಆ ಬಳಿಕ ಸೋಮೇಶ್ವರ ದೇವಸ್ಥಾನಕ್ಕೂ ಒಂದು ಕೋಟಿಯ ಬ್ರಹ್ಮರಥವನ್ನು ನೀಡಿದ್ದರು.

Also Read  ಶಕ್ತಿ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕರಿಗೆ ಸನ್ಮಾನ

error: Content is protected !!
Scroll to Top