ಗಂಡು ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ

(ನ್ಯೂಸ್ ಕಡಬ)newskadaba.com ಮೈಸೂರು, . 11.  ದಸರಾ ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಇತ್ತ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ.

ನವರಾತ್ರಿ ಸಂಭ್ರಮದಲ್ಲಿ ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಶುಭಸುದ್ದಿ ಸಿಕ್ಕಿದೆ. ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ.

Also Read  ಇಂದು ಪ್ರಧಾನಿ ಮೋದಿಯಿಂದ ಟೆಲಿಕಾಂ ಸ್ಟ್ಯಾಂಡರ್ಡ್‌ ಸಮ್ಮೇಳನ ಉದ್ಘಾಟನೆ

error: Content is protected !!
Scroll to Top