ಕೇಂದ್ರದಿಂದ 1,78,173 ಕೋಟಿ ತೆರಿಗೆ ಹಣ ಹಂಚಿಕೆ

(ನ್ಯೂಸ್ ಕಡಬ)newskadaba.com,. 11ನವದೆಹಲಿ : ಕೇಂದ್ರ ಸರ್ಕಾರವು ₹1,78,173 ಕೋಟಿ ತೆರಿಗೆ ಪಾಲನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ₹6,498 ಕೋಟಿ ಸಿಕ್ಕಿದೆ. ಬಿಜೆಪಿ ಆಡಳಿತದ ರಾಜ್ಯಗಳಿಗೆ ಮತ್ತು ಮಿತ್ರ ಪಕ್ಷಗಳ ಸರ್ಕಾರಕ್ಕೆ ಸಿಂಹಪಾಲು ದೊರೆತಿದೆ.

 

“ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ರಾಜ್ಯಗಳನ್ನು ಸಕ್ರಿಯಗೊಳಿಸುವ ಪ್ರಯತ್ನದಲ್ಲಿ,ರಾಜ್ಯ ಸರ್ಕಾರಗಳಿಗೆ ₹1,78,173 ಕೋಟಿ ರೂಪಾಯಿಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ. ಅಕ್ಟೋಬರ್‌ನಲ್ಲಿ ಬಾಕಿ ಇರುವ ₹89,086.50 ಕೋಟಿ ನಿಯಮಿತ ಕಂತಿನ ಜೊತೆಗೆ ಒಂದು ಮುಂಗಡ ಕಂತನ್ನೂ ಸಹ ಒಳಗೊಂಡಿದೆ.“ಈ ಬಿಡುಗಡೆಯು ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅವುಗಳ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು” ಎಂದು ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Also Read  ಸುರತ್ಕಲ್: ಪ್ರಿಯತಮೆಯ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ…!

error: Content is protected !!
Scroll to Top