ಕಡಬ ಸೇರಿದಂತೆ ಕರಾವಳಿಯ ಹಲವೆಡೆ ಭಾರೀ ಗುಡುಗು ► ಕಾದು ಕೆಂಪಾಗಿದ್ದ ಇಳೆಗೆ ತಂಪೆರೆದ ಮಳೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.14. ಕೇರಳ ಹಾಗೂ ಲಕ್ಷದ್ವೀಪಗಳಲ್ಲಿನ ಚಂಡಮಾರುತದ ಪರಿಣಾಮವಾಗಿ ಕಡಬ, ಪುತ್ತೂರು ಸೇರಿದಂತೆ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಬುಧವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣದಿಂದಿದ್ದು, ಸಂಜೆಯಾಗುತ್ತಲೇ ಭಾರೀ ಮಳೆಯಾಗಿದೆ. ಕಡಬ, ಪುತ್ತೂರು, ಉಪ್ಪಿನಂಗಡಿ, ಬೆಳ್ಳಾರೆ, ಸುಳ್ಯ ಸೇರಿದಂತೆ ಹಲವೆಡೆ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಯಿತು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಅರಬ್ಬೀ ಸಮುದ್ರದ ಆಗ್ನೇಯ ಭಾಗ ಮಾಲ್ಡೀವ್ಸ್ ಕರಾವಳಿ ಕಡೆಗೂ ವ್ಯಾಪಿಸಲಿದೆ’ ಎಂದು ಹವಾಮಾನ ಇಲಾಖೆ ಸೋಮವಾರ ಎಚ್ಚರಿಕೆ ನೀಡಿತ್ತು. ಗುರುವಾರವೂ ಭಾರೀ ಮಳೆಯಾಗುವ ಸಂಭವವಿದೆ.

Also Read  ರಜೆ ನೀಡಿದ ಜಿಲ್ಲಾಧಿಕಾರಿಗೆ ಮಕ್ಕಳಿಂದ ಅಭಿನಂದನೆ - ವಿಡಿಯೋ ವೈರಲ್

error: Content is protected !!
Scroll to Top