ಇಸ್ರೇಲ್‌ ನ ಭೀಕರ ವಾಯುದಾಳಿಗೆ 22 ಮಂದಿ ಮೃತ್ಯು: 117 ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಬೈರೂತ್, . 11.  ಇಸ್ರೇಲ್‌ ಸೇನೆಯು ಸೆಂಟ್ರಲ್‌ ಬೈರೂತ್‌ ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದು, ಸುಮಾರು 117 ಮಂದಿ ಗಾಯಗೊಂಡಿದ್ದಾರೆ.

ದಾಳಿಯಿಂದ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲಕರಿಗೆ ಅಪಾಯ ಉಂಟಾಗಿದ್ದು, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ದಾಳಿ ಕುರಿತು ಸ್ಪೇನ್‌ ಹಾಗೂ ಇಟಲಿ ದೇಶಗಳು ಆಕ್ರೋಶ ಹೊರಹಾಕಿದ್ದು, ಸೆಂಟ್ರಲ್‌ ಬೈರೂತ್‌ನ ವಿಶ್ವಸಂಸ್ಥೆ ಶಾಂತಿಪಾಲನಾ ಪ್ರಧಾನ ಕಚೇರಿ, ಲೆಬನಾನ್‌ ಸೇನಾ ಟ್ಯಾಂಕರ್‌ಗಳನ್ನ ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತಾಧಿಕಾರಿ ಬದುಕುಳಿದಿದ್ದಾರೆ. ಈ ದಾಳಿಯು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿವೆ.

Also Read  ಮದುವೆಯಾಗು ಅಂದಿದ್ದಕ್ಕೆ ಪ್ರಿಯತಮೆಯ ಕತ್ತುಹಿಸುಕಿ ಕೊಂದ ಪ್ರಿಯಕರ ಆರೋಪಿ ಅರೆಸ್ಟ್….!

 

error: Content is protected !!
Scroll to Top