ರೇಣುಕಾಸ್ವಾಮಿ ಕೊಲೆ ಕೇಸ್‌: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಪ್ರದೋಷ ಸ್ಥಳಾಂತರ

(ನ್ಯೂಸ್ ಕಡಬ)newskadaba.com, ಅ.10 ಬೆಳಗಾವಿ:  ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್ ಸಹಚರ ಪ್ರದೋಷ್ ನನ್ನು ಹಿಂಡಲಗಾ ಕಾರಾಗೃಹದಿಂದ ಮರಳಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಗುರುವಾರ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಲಾಯಿತು.

ಬೆಂಗಳೂರು ಕಾರಾಗೃಹದಿಂದ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಿದ್ದರ ಬಗ್ಗೆ ಪ್ರದೋಷ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣಾ ಕೈದಿ ಪ್ರದೋಷನನ್ನು ಮರಳಿ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಆದೇಶ ಪ್ರತಿ ಬಂದ ಬಳಿಕ ಗುರುವಾರ ಬೆಳಗ್ಗೆ ಸ್ಥಳಾಂತರಿಸಲಾಯಿತು. 44 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆದ ಪ್ರದೋಷ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾನೆ.

Also Read  ಮೌಲ್ಯಮಾಪನ ಕಾರ್ಯ ಪೂರ್ಣ - ಎಸೆಸ್ಸೆಲ್ಸಿ ಫಲಿತಾಂಶ ಶೀಘ್ರ

error: Content is protected !!
Scroll to Top