ಲಿಖಿತ ಪರೀಕ್ಷೆ ಇಲ್ಲದೆ ಭಾರತೀಯ ರೈಲ್ವೇ IRCTCಯಲ್ಲಿ ನೇಮಕಾತಿ

(ನ್ಯೂಸ್ ಕಡಬ)newskadaba.com, .10 ನವದೆಹಲಿ: ಭಾರತೀಯ ರೈಲ್ವೇ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಶನ್ (IRCTC)ಯ ಖಾಲಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ನವೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಉದ್ಯೋಗ ಹುಡುಕುತ್ತಿರುವ ಹಾಗೂ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ಕೆಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿಶೇಷ ಅಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಗರಿಷ್ಠ ತಿಂಗಳ ವೇತನ 2 ಲಕ್ಷ ರೂಪಾಯಿ. ನವೆಂಬರ್ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ಇಲ್ಲದಿರುವ ಕಾರಣ ಸಂದರ್ಶನದ ಮೂಲಕ ಸೂಕ್ತರನ್ನು ಇಲಾಖೆ ಆಯ್ಕೆ ಮಾಡಲಿದೆ. IRCTC ಅಧಿಕೃತ ವೆಬ್‌ಸೈಟ್‌ನಲ್ಲಿ ಉದ್ಯೋಗ ನೇಮಕಾತಿ ಮಾಹಿತಿ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವಿನಂತಿಸಲಾಗಿದೆ.

Also Read  ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತರು ಇಂದೇ ಸಂಪರ್ಕಿಸಿ

error: Content is protected !!
Scroll to Top