ಮಹಿಳಾ ಟಿ 20: ಭಾರತಕ್ಕೆ ಜಯ

(ನ್ಯೂಸ್ ಕಡಬ)newskadaba.com, ಅ. 09: ಮೂರನೇ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಶ್ರೀಲಂಕಾ ತಂಡವನ್ನು 82 ರನ್ ಗಳ ಭಾರೀ ಅಂತರದಿಂದ ಸೋಲಿಸಿದೆ.

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಇದು ಅತಿ ದೊಡ್ಡ ಅಂತರದ ಜಯವಾಗಿದೆ. ಸೆಮಿಫೈನಲ್ ಹಂತಕ್ಕೇರುವ ಆಸೆ ಜೀವಂತ ಇರಿಸಿಕೊಳ್ಳುವ ನಿಟ್ಟಿನಲ್ಲಿ ಈ ಜಯ ಅನಿವಾರ್ಯವಾಗಿತ್ತು. ಈ ಅಗಾಧ ಅಂತರದ ಜಯದಿಂದಾಗಿ ಭಾರತ ತಂಡ ಎ ಗುಂಪಿನಲ್ಲಿ ಇದೀಗ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿದೆ. ಜತೆಗೆ ನಿವ್ವಳ ರನ್ ರೇಟ್ನಲ್ಲೂ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

Also Read  ವಾಮಾಚಾರ ಪ್ರಯೋಗಗಳು ನಡೆದಿದ್ದರೆ ತಪ್ಪದೇ ಈ ನಿಯಮವನ್ನು ಅನುಸರಿಸಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top