ಎಮೋಷನ್- ಹಾಡಲಾಗದೇ ಸ್ಟೇಜ್ ಮೇಲೆ ಕೈ ಮುಗಿದು ಕುಳಿತ ಬಾದ್ ಶಾ..!

(ನ್ಯೂಸ್ ಕಡಬ) newskadaba.com ಅ. 09. ಬಾಲಿವುಡ್ ಗಾಯಕ ಬಾದ್ ಶಾ ಅವರು ಅಕ್ಟೋಬರ್ 8 ರಂದು ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಕನ್ನಡದ ಒಂದು ಹಾಡನ್ನು ಕೇಳಿ ಹಾಡಲು ಆಗದೇ ಸ್ಟೇಜ್ ಮೇಲೆ ಒಂದು ಕಡೆ ಕೈ ಮುಗಿದು ಕುಳಿತ ಘಟನೆ ವರದಿಯಾಗಿದೆ.

ಗಾಯಕ ಬಾದ್‌ಶಾ ಅವರು ‘ಯುವ ದಸರಾ’ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ‘ಯಾರೂ ಸ್ಟಾರ್ ಅಲ್ಲ, ಯಾರು ಸೂಪರ್ ಸ್ಟಾರ್ ಕೂಡಾ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುವುದು ಗೊತ್ತಷ್ಟೇ. ನಾನು ಫೀಲೀಂಗ್ಸ್ ನ ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರಋಣಿ’ ಎಂದು ತಿಳಿಸಿದ್ದಾರೆ. ಬಳಿಕ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡನ್ನು ಹಾಕಲಾಯಿತು. ಈ ವೇಳೆ ಬಾದ್ ಶಾ ಅವರು ಎಮೋಷನಲ್ ಆಗಿದ್ದು, ಅವರಿಗೆ ಹಾಡಲೂ ಆಗದೆ ಒಂದು ಕಡೆಯಲ್ಲಿ ಕುಳಿತು, ಕೈ ಮುಗಿದು ಬಿಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಹಲವಾರು ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ.

Also Read  ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ

error: Content is protected !!
Scroll to Top